Tumkurnews
ತುಮಕೂರು; ಕ್ಷುಲ್ಲಕ ಕಾರಣಕ್ಕಾಗಿ ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ತುಮಕೂರು ತಾಲ್ಲೂಕಿನ ಬೆಳ್ಳಾವಿಯಲ್ಲಿ ಘಟನೆ ಸಂಭವಿಸಿದ್ದು, ಪವಿತ್ರ(18) ಮೃತ ದುರ್ದೈವಿ. ಈಕೆ ಬೆಳ್ಳಾವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ಓದುತ್ತಿದ್ದಳು.
ಆಟವಾಡುತ್ತಿದ್ದ ಪವಿತ್ರಗೆ ಪೋಷಕರು, ಆಟವಾಡಿದ್ದು ಸಾಕು ಬಂದು ಓದಿಕೋ ಎಂದಿದ್ದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಎಲ್ಲರೆದುರು ಮನೆಯವರು ಬೈದರು ಎಂಬ ಕಾರಣಕ್ಕೆ ನೊಂದ ಯುವತಿ ಮನೆಗೆ ಬಂದವಳೇ ನೇಣು ಬಿಗಿದುಕೊಂಡಿದ್ದಾಳೆ. ಬೆಳ್ಳಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
+ There are no comments
Add yours