ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ಸಾವು

1 min read

ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ಸಾವು
Tumkurnews
ತುಮಕೂರು; ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 21ರಂದು ಮೃತ ಪಟ್ಟಿದ್ದು, ಮೃತನ ಶವವನ್ನು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.

ಓಮ್ನಿ ಕಾರಿನಲ್ಲಿ ಸಜೀವ ದಹನವಾದ ವ್ಯಕ್ತಿ; ಅಪಘಾತ? ಕೊಲೆ?; ಈ ವಿಡಿಯೋದಲ್ಲಿದೆ ಸುಳಿವು!
ಮೃತನು 5.5 ಅಡಿ ಎತ್ತರ, ಒಣಕಲು ಶರೀರ, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಮೈಮೇಲೆ ಕಪ್ಪು ಬಣ್ಣದ ಟೀ-ಶರ್ಟ್, ಬಲ ಮೊಣಕೈ ಮೇಲೆ ಬಿ. ಶಿವಸುಂದರ್ ಎಂಬ ಹಚ್ಚೆ ಗುರುತಿರುತ್ತದೆ ಹಾಗೂ ಎಡಭಾಗದ ಸೊಂಟದ ಬಳಿ ಹಳೆಯ ತರಚಿದ ಗಾಯದ ಗುರುತುಗಳು ಕಂಡು ಬರುತ್ತಿದೆ. ಈತನ ವಾರಸುದಾರರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ಹೆಚ್ಚಿನ ಮಾಹಿತಿಗಾಗಿ ದೂವಾ.ಸಂ. 08132-220229/0816-2272451ನ್ನು ಸಂಪರ್ಕಿಸಬಹುದೆಂದು ಪೊಲೀಸ್ ಇನ್ಸ್’ಪೆಕ್ಟರ್ ಮನವಿ ಮಾಡಿದ್ದಾರೆ.

ದೇಶಾದ್ಯಂತ ಪಿಎಫ್ಐ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ

About The Author

You May Also Like

More From Author

+ There are no comments

Add yours