ಗುಂಡಿ ನೀರಿನಲ್ಲಿ ವ್ಯಕ್ತಿಯ ಶವ ಪತ್ತೆ; ವಾರಸುದಾರರ ಪತ್ತೆಗೆ ಮನವಿ

1 min read

 

ಅಪರಿಚಿತ ಶವ ಪತ್ತೆ
Tumkurnews
ತುಮಕೂರು; ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮರಳೂರು ಕೆರೆಯ ಹಿಂಭಾಗ ಕೈದಾಳ ಕೆರೆ ಏರಿಗೆ ಹೋಗುವ ರಸ್ತೆಯ ಎಡಭಾಗದ ಗುಂಡಿಯ ನೀರಿನಲ್ಲಿ ಸೆಪ್ಟೆಂಬರ್ 13ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಂಗ್ರೆಸ್ ಸೇರ್ಪಡೆ ವದಂತಿ; ಮಾಧುಸ್ವಾಮಿ ಕಾರ್ಯಕ್ರಮಗಳತ್ತ ಮುಖ ಮಾಡದ ಬಿಜೆಪಿ ಕಾರ್ಯಕರ್ತರು
ಮೃತ ವ್ಯಕ್ತಿಯು ಸುಮಾರು 2-3 ದಿನಗಳ ಹಿಂದೆ ಮೃತ ಪಟ್ಟಿರುವಂತೆ ಕಂಡುಬರುತ್ತಿದ್ದು, ವಾರಸುದಾರರು ಪತ್ತೆಯಾಗಿರುವುದಿಲ್ಲ. ಮೃತನು ಸುಮಾರು 55 ರಿಂದ 60 ವರ್ಷದವನಾಗಿದ್ದು, 168 ಸೆಂ.ಮೀ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ದೃಢಕಾಯ ಶರೀರ ಹೊಂದಿದ್ದು, ದೇಹವು ಕೊಳೆಯುವ ಸ್ಥಿತಿಯಲ್ಲಿರುತ್ತದೆ. ಮೃತನ ಮೈಮೇಲೆ ಕೆಂಪು ಬಣ್ಣದ ಅರ್ಧ ತೋಳಿನ ಷರ್ಟ್ ಮತ್ತು ಒಳ ಉಡುಪು ಇರುತ್ತದೆ. ಮತ್ತು ಶವವನ್ನು ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದ್ದು, ಮೃತನ ವಾರಸುದಾರರಿದ್ದಲ್ಲಿ ದೂ.ವಾ.ಸಂ. 0816-2278381/530/2340/8000ಯನ್ನು ಸಂಪರ್ಕಿಬಹುದೆಂದು ಸಬ್‍ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.

RSS, ಬಜರಂಗದಳ, VHP ಬಗ್ಗೆ ಅಲ್ಪಸಂಖ್ಯಾತರು ಎಚ್ಚರಿಕೆಯಿಂದ ಇರಬೇಕು; ಸಿದ್ದರಾಮಯ್ಯ

About The Author

You May Also Like

More From Author

+ There are no comments

Add yours