Tumkurnews
ತುಮಕೂರು; ರಾತ್ರಿ ಸುರಿದ ಭಾರೀ ಮಳೆಗೆ ಕೊರಟಗೆರೆ ತಾಲ್ಲೂಕು ದಾಸಲಕುಂಟೆ ಕೆರೆ ಕೋಡಿ ಬಿದ್ದಿದ್ದು, ಕೋಡಿ ನೀರಿನಲ್ಲಿ ಸಿಕ್ಕಿ ಬಿದ್ದಿದ್ದ ಬಸ್ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾತ್ರಿ ಭಾರೀ ಮಳೆಯಾಗಿದ್ದು, ಕೊರಟಗೆರೆ ತಾಲ್ಲೂಕಿನ ದಾಸಲಕುಂಟೆ ಕೆರೆ ತುಂಬಿ ಹರಿಯುತ್ತಿದೆ. ರಭಸವಾಗಿ ಹರಿಯುತ್ತಿದ್ದ ಕೋಡಿ ನೀರನ್ನು ಲೆಕ್ಕಿಸದೆ ಬಸ್ ಚಾಲಕನೋರ್ವ ಬಸ್ಸ’ನ್ನು ರಸ್ತೆ ದಾಟಿಸಲು ಮುಂದಾಗಿದ್ದಾನೆ. ಈ ವೇಳೆ ನೀರಿನಲ್ಲಿ ಸಿಕ್ಕಿಹಾಕಿಕೊಂಡ ಬಸ್ ಮುಂದೆ ಚಲಿಸಲಾಗದೆ ನಿಂತಿದೆ. ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಪ್ರಯಾಣಿಕರಿಗೆ ಪ್ರಾಣಭೀತಿ ಎದುರಾಗಿದ್ದು, ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಸ್ಥಳಕ್ಕಾಗಮಿಸಿದ ಸ್ಥಳೀಯರು ಜೆಸಿಬಿ ನೆರವಿನಿಂದ ಪ್ರಯಾಣಿಕರ ಸಹಿತ ಬಸ್ ಅನ್ನು ರಕ್ಷಿಸಿದ್ದಾರೆ.
ಹರಿದು ಬಂದ ಜನ; ಕೋಡಿ ಬಿದ್ದ ಕೆರೆ ನೋಡಲು ಸುತ್ತಮುತ್ತಲಿನ ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸ್ ಭದ್ರತೆ ಒದಗಿಸುವಂತೆ ಸ್ಥಳೀಯರು ಕೋರಿದ್ದಾರೆ.
+ There are no comments
Add yours