ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಸರ್ಕಾರದ ಆದೇಶಕ್ಕೆ ಬ್ರೇಕ್
Tumkurnews
ಬೆಂಗಳೂರು; ನಾಲ್ಕು ಚಕ್ರದ ವೈಯಕ್ತಿಕ ವಾಹನ ಹೊಂದಿರುವ ಅಂತ್ಯೋದಯ ಅನ್ನ, ಆದ್ಯತಾ ಪಡಿತರ ಚೀಟಿದಾರರ ಮೇಲೆ ಕ್ರಮ ಕೈಗೊಳ್ಳುವ ಆದೇಶವನ್ನು ಸರ್ಕಾರ ತಡೆ ಹಿಡಿದಿದೆ.
ನಾಲ್ಕು ಚಕ್ರದ ವೈಯಕ್ತಿಕ ವಾಹನ ಹೊಂದಿರುವ ಅಂತ್ಯೋದಯ ಅನ್ನ, ಆದ್ಯತಾ ಪಡಿತರ ಚೀಟಿಗಳನ್ನು ಪರಿವರ್ತಿಸಿ ವರದಿ ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಆದೇಶಿಸಿತ್ತು. ಈ ಆದೇಶದ ಅನ್ವಯ ನಾಲ್ಕು ಚಕ್ರದ ಚಾಹನ ಹೊಂದಿರುವ ಬಿಪಿಎಲ್ ಕಾರ್ಡ್’ದಾರರ ಪಡಿತರ ಚೀಟಿಯನ್ನು ರದ್ದು ಪಡಿಸಿ, ದಂಡ ವಿಧಿಸುವ ಪ್ರಕ್ರಿಯೆ ನಡೆದಿತ್ತು. ಸರ್ಕಾರದ ಈ ನಡೆಗೆ ರಾಜ್ಯದಲ್ಲಿ ವ್ಯಾಪಕವಾದ ವಿರೋಧ ವ್ಯಕ್ತವಾಗಿತ್ತು. ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರು ವ ರಾಜ್ಯ ಸರ್ಕಾರವು ತನ್ನ ಹಿಂದಿನ ಆದೇಶವನ್ನು ಸದ್ಯಕ್ಕೆ ತಡೆಹಿಡಿದಿದೆ.
+ There are no comments
Add yours