ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾದ ಜಿವಿಪಿ
Tumkurnews
ತುಮಕೂರು; ವಿದ್ಯುತ್ ಸರಬರಾಜು ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನು (ಜಿ.ವಿ.ಪಿ) ಖಾಯಂಗೊಳಿಸಲು ಶ್ರಮಜೀವಿಗಳ ವೇದಿಕೆಯಡಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೆಪ್ಟೆಂಬರ್ 6 ರಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ಜಿವಿಪಿಗಳು ನಿರ್ಧಿಸಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆ ವಿರುದ್ಧ ತನಿಖೆಗೆ ಆದೇಶ
ರಾಜ್ಯ ಸರ್ಕಾರದ ಒಡೆತನಕ್ಕೆ ಸೇರಿದ ರಾಜ್ಯದ 5 ವಿದ್ಯುತ್ ಕಂಪನಿಗಳಲ್ಲಿ ಜಿವಿಪಿಗಳಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 3700 ಜನರ ಖಾಯಂಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸೆಪ್ಟೆಂಬರ್ 6 ರಂದು ಬೆಳಗ್ಗೆ 11 ಗಂಟೆಯಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಶ್ರಮಜೀವಿಗಳ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಜಿ.ವಿ.ಪಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟದ ರೂವಾರಿ ಚಂದ್ರಶೇಖರ ಹಿರೇಮಠ್ ಹಾಗೂ ಜಿವಿಪಿ ಸಂಘದ ಅಧ್ಯಕ್ಷ ಕಾಂತರಾಜು ತಿಳಿಸಿದರು.
ತುಮಕೂರು ಡಿಸಿಸಿ ಬ್ಯಾಂಕ್ ವಿರುದ್ಧ ತನಿಖೆಗೆ ಆದೇಶ
ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ್, ರಾಜ್ಯಾದ್ಯಂತ ಸುಮಾರು 3700 ಜಿವಿಪಿಗಳು ಕಳೆದ ಸುಮಾರು 19 ವರ್ಷಗಳಿಂದ ಬೆಸ್ಕಾಂನಲ್ಲಿ ಸೇವೆ ಸಲ್ಲಿಸುತ್ತಿದ್ದು, ಗ್ರಾಪಂ ವ್ಯಾಪ್ತಿಗೆ ಒಬ್ಬರಂತೆ ನೇಮಕಗೊಂಡಿದ್ದಾರೆ.
ಆ ವ್ಯಾಪ್ತಿಯ ಸುಮಾರು ಎರಡು ಸಾವಿರಕ್ಕೂ ಮೇಲ್ಪಟ್ಟ ಗ್ರಾಹಕರಿಗೆ ವಿದ್ಯುತ್ ಬಿಲ್ ನೀಡುವುದು, ಹಣ ಪಡೆದು ಅದೇ ದಿನ ಪಾವತಿಸುವುದು ಹಾಗೂ ಇಲಾಖೆಯ ಎಲ್ಲಾ ಕೆಲಸ ನಿಭಾಯಿಸುವುದು ಇವರ ಜವಾಬ್ದಾರಿಯಾಗಿದೆ. ಇವರನ್ನು ನೇಮಕ ಮಾಡಿಕೊಳ್ಳುವಾಗ ವಿದ್ಯಾರ್ಹತೆ, ವಯೋಮಿತಿ, ರೆಸರ್ವೆಷನ್, ಮೆರಿಟ್ ಮುಂತಾದುವುಗಳನ್ನು ಪರೀಕ್ಷಿಸಿ ರಾಜ್ಯ ಸರ್ಕಾರಿ ನೌಕರಿಗೆ ನೇಮಕ ಮಾಡಿಕೊಳ್ಳುವಂತೆ ಮಾಡಿ ನಂತರ ಇವರ ಜೊತೆ ವ್ಯವಹಾರಿಕ ಒಪ್ಪಂದ ಮಾಡಿಕೊಂಡು ಮಾಸಿಕ 12 ಸಾವಿರ ಕಮಿಷನ್ ನೀಡುತ್ತಿದ್ದು, ಯಾವುದೇ ತುಟ್ಟಿಭತ್ಯೆ ನೀಡುತ್ತಿಲ್ಲ. ಇವರನ್ನು ಖಾಯಂ ಮಾಡುವಂತೆ ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯ 2020 ರ ಆಗಸ್ಟ್ 2 ರಂದು ತೀರ್ಪು ನೀಡಿ ಎರಡು ವಾರಗಳ ಕಾಲವಕಾಶ ನೀಡಿ ಮುಂಬರುವ ಅಕ್ಟೋಬರ್ 2 ಗಾಂಧಿ ಜಯಂತಿಯಿಂದ ಆನ್ವಯವಾಗುವಂತೆ ತೀರ್ಪು ನೀಡಿ ಇವರನ್ನು ವಿದ್ಯುತ್ ಇಲಾಖೆಯ ಮೀಟರ್ ರೀಡರ್ ಅಥವಾ ತತ್ಸಮಾನ ಹುದ್ದೆ ರಚಿಸಿ ಖಾಯಂ ಗೊಳಿಸುವಂತೆ ಅದೇಶಿಸಿದೆ.
ಆದರೆ ರಾಜ್ಯ ಸರ್ಕಾರ ಇದನ್ನು ಅನುಷ್ಠಾನಗೊಳಿಸದೆ ವಿಭಾಗೀಯ ಪೀಠಕ್ಕೆ ಇವರ ವಿರುದ್ಧ ಮೇಲ್ಮನವಿ ಸಲ್ಲಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಸರ್ಕಾರದ ಆದೇಶಕ್ಕೆ ತಡೆ
ನಂತರ ಮಾತನಾಡಿದ ಜಿವಿಪಿ ಸಂಘದ ಅಧ್ಯಕ್ಷ ಕಾಂತರಾಜು, ಒಂದು ಕಡೆ ರಾಜ್ಯದ ಇಂಧನ ಸಚಿವ ಸುನಿಲ್ ಕುಮಾರ್ ಅವರು ಜಿವಿಪಿಗಳ ಖಾಯಂಗೆ ಅಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಭರವಸೆ ನೀಡುತ್ತಿದ್ದು, ಇನ್ನೊಂದೆಡೆ ಇವರನ್ನು ಖಾಯಂ ಮಾಡದೆ ಇರಲು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿರುವುದು ಆಶ್ಚರ್ಯ ತಂದಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅದೇಶದಂತೆ ಸೇವೆ ಖಾಯಂಗೊಳಿಸಲು ಒತ್ತಾಯಿಸಿ ಸೆಪ್ಟೆಂಬರ್ 6 ರಿಂದ ಅನಿರ್ಧಿಷ್ಟಾವದಿ ಧರಣಿ ಸತ್ಯಾಗ್ರಹವನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರಮ ಜೀವಿಗಳ ವೇದಿಕೆಯ ಅಧ್ಯಕ್ಷ ಚಂದ್ರಶೇಖರ ಹಿರೇಮಠ್, ಜಿ.ವಿ.ಪಿ ಸಂಘದ ಅಧ್ಯಕ್ಷ ಕಾಂತರಾಜು, ಬೆಸ್ಕಾಂ ಅಧ್ಯಕ್ಷ ದಯಾನಂದ, ಕಾರ್ಯಾದರ್ಶಿ ರಘು, ಕೊಟ್ರೇಶ್.ಪಿ.ತೆಲಗಿ, ನಿರಂಜನ್, ಎಸ್. ನಾಗರಾಜು ದೇವನಹಳ್ಳಿ, ನಾಗರಾಜು ಹರಸೂರ್, ನರೇಂದ್ರ ರೆಡ್ಡಿ ಮತ್ತಿತರರಿದ್ದರು.
ಅಧಿಕಾರಿಗಳು ಪ್ರಾಮಾಣಿಕರಾಗಿರಬೇಕು, ಅಧಿಕಾರದ ಅಮಲು ಇರಬಾರದು; ಜಿಲ್ಲಾಧಿಕಾರಿ
+ There are no comments
Add yours