ಅಂಗಡಿಗೆ ನುಗ್ಗಿದ ಉಡ; ವಾರ್ಕೊ ಸಂಸ್ಥೆಯಿಂದ ರಕ್ಷಣೆ

1 min read

 

ಅಂಗಡಿಗೆ ನುಗ್ಗಿದ್ದ ಉಡ ರಕ್ಷಣೆ
Tumkurnews
ತುಮಕೂರು; ನಗರದ ಬಟವಾಡಿಯಲ್ಲಿ ಅಂಗಡಿಯೊಳಗೆ ಬಂದಿದ್ದ ಉಡವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಡಲಾಯಿತು.
ಅನಿರೀಕ್ಷಿತವಾಗಿ ಬಂದ ಉಡ ಬಟವಾಡಿಯ ಲಕ್ಷ್ಮೀ ಬ್ಯಾಂಗಲ್ಸ್ ಸ್ಟೋರ್ ಒಳಗೆ ಹೋಗುವುದನ್ನು ಅಲ್ಲಿದ್ದ ಸಾರ್ವಜನಿಕರು ಗಮನಿಸಿದ್ದು, ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಗೆ (ವಾರ್ಕೊ) ತಿಳಿಸಿದರು.
ಸ್ಥಳಕ್ಕೆ ಬಂದ ಮನು ಅಗ್ನಿವಂಶಿ ಟೇಬಲ್‌ ಕೆಳಗೆ ಸೇರಿಕೊಂಡಿದ್ದ ಸುಮಾರು ಎರಡು ಅಡಿ ಉದ್ದದ ಉಡವನ್ನು (ಮಾನಿಟರ್ ಲಿಝರ್ಡ್) ಸುರಕ್ಷಿತವಾಗಿ ರಕ್ಷಿಸಿ ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಸಿಬ್ಬಂದಿ ನರಸಿಂಹರಾಜು ಅವರ ಮಾರ್ಗದರ್ಶನದಂತೆ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ನಗರ ಪ್ರದೇಶದಲ್ಲಿ ಇಂತಹ ವನ್ಯಜೀವಿಗಳು ಬಂದರೆ ಸಂಸ್ಥೆಗೆ 9964519576 ಕರೆಮಾಡಬಹುದು ಎಂದು ವಾರ್ಕೊ ಮನವಿ ಮಾಡಿದೆ.

ಶಿಕ್ಷಕಿಯ ಮನೆ ಕೆಲಸಕ್ಕೆ ವಸತಿ ಶಾಲೆ ವಿದ್ಯಾರ್ಥಿನಿಯರ ಬಳಕೆ; ಕಣ್ಮುಚ್ಚಿ ಕುಳಿತ ಇಲಾಖೆ

About The Author

You May Also Like

More From Author

+ There are no comments

Add yours