ಬಿಜೆಪಿ ಫ್ಲೆಕ್ಸ್ ಗಳಲ್ಲಿ ತಲೆಕೆಳಗಾದ ರಾಷ್ಟ್ರ ಧ್ವಜ; ಸಾರ್ವಜನಿಕರಿಂದ ಟೀಕೆ

1 min read

 

Tumkurnews
ತುಮಕೂರು; ದೇಶದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಎಲ್ಲೆಡೆ ಕೇಸರಿ, ಬಿಳಿ, ಹಸಿರು ತ್ರಿವರ್ಣ ಧ್ವಜಗಳು ಕಂಡು ಬರುತ್ತಿವೆ. ಇದರ ನಡುವೆಯೇ ಮಧುಗಿರಿ ತಾಲ್ಲೂಕಿನಲ್ಲಿ ಬಿಜೆಪಿ ಮುಖಂಡರೊಬ್ಬರು ತ್ರಿವರ್ಣ ಧ್ವಜವನ್ನು ತಲೆ ಕೆಳಗಾಗಿ ಮುದ್ರಿಸಿ ಪ್ರಚಾರ ಮಾಡುತ್ತಿರುವುದು ಕಂಡು ಬಂದಿದೆ.

ಮುಖ್ಯಮಂತ್ರಿ ಬದಲಾವಣೆ ವಿಚಾರ; ಸುರೇಶ್ ಗೌಡ ಸ್ಪೋಟಕ ಹೇಳಿಕೆ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಧುಗಿರಿ ಪಟ್ಟಣದಲ್ಲಿ ಬಿಜೆಪಿ‌ ಮುಖಂಡರು ಶುಭಾಶಯಗಳನ್ನು ಕೋರಿ ವಿವಿಧೆಡೆ ಫ್ಲೆಕ್ಸ್ ಗಳನ್ನು ಕಟ್ಟುತ್ತಿದ್ದಾರೆ. ಆದರೆ ಈ ಫ್ಲೆಕ್ಸ್ ಗಳಲ್ಲಿ ಕೇಸರಿ, ಬಿಳಿ, ಹಸಿರು ಧ್ವಜವನ್ನು ತಲೆ ಕೆಳಗಾಗಿ ಮುದ್ರಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಅಕಸ್ಮಾತ್ತಾಗಿ ತಪ್ಪಾಗಿ ಫ್ಲೆಕ್ಸ್ ಮುದ್ರಿತವಾಗಿದ್ದರೂ ಅದನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಬಾರದಿತ್ತು, ನಿತ್ಯ ಲಕ್ಷಾಂತರ ಜನ, ಸಾವಿರಾರು ವಿದ್ಯಾರ್ಥಿಗಳು ಓಡಾಡುವ ಸ್ಥಳದಲ್ಲೇ ಉಲ್ಟಾ ಧ್ವಜ ಪ್ರದರ್ಶಿಸುವುದು ಎಷ್ಟು ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ವ್ಯಾಪಕ ಮಳೆ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಜಗಮಂಗಲಿ ನದಿ
ಭೀಮನಕುಂಟೆ ಹನುಮಂತರಾಜು ಎಂಬ ಹೆಸರು ಹಾಗೂ ಭಾವಚಿತ್ರವನ್ನೊಳಗೊಂಡ ಫ್ಲೆಕ್ಸ್ ಗಳಲ್ಲಿ ಈ ರೀತಿಯ ತಪ್ಪುಗಳಾಗಿದ್ದು, ಕೂಡಲೇ ಸಂಬಂಧಪಟ್ಟವರು ಈ ಫ್ಲೆಕ್ಸ್ ತೆರವುಗೊಳಿಸಬೇಕು ಅಥವಾ ತಾಲ್ಲೂಕು ಆಡಳಿತ ಈ‌ ಫ್ಲೆಕ್ಸ್ ಗಳನ್ನು ವಶಕ್ಕೆ ಪಡೆಯಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

75ನೇ ಸ್ವಾತಂತ್ರೋತ್ಸವ; ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ

About The Author

You May Also Like

More From Author

+ There are no comments

Add yours