ಶಾಸಕ ಗೌರಿಶಂಕರ್ ವಿರುದ್ಧ ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ
Tumkurnews
ತುಮಕೂರು; ಮಹಿಳೆಯರಿಗೆ ಉದ್ಯೋಗ, ವಿದ್ಯಾರ್ಥಿಗಳಿಗೆ ಕಾಲೇಜು ಸೀಟು ಸೇರಿದಂತೆ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ ಎಂದು ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರು ಶಾಸಕ ಡಿ.ಸಿ ಗೌರಿಶಂಕರ್ ವಿರುದ್ಧ ಆರೋಪಿಸಿದರು.
(ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರ ಶಾಸಕ ಡಿ.ಸಿ ಗೌರಿಶಂಕರ್ ವಿರುದ್ಧ ಹರಿಹಾಯ್ದರು; ವಿಡಿಯೋ)
ಮುಖ್ಯಮಂತ್ರಿ ಬದಲಾವಣೆ ವಿಚಾರ; ಸುರೇಶ್ ಗೌಡ ಸ್ಪೋಟಕ ಹೇಳಿಕೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಅವರಿಗೆ ಮತಕೇಳಲು ಯಾವುದೇ ವಿಚಾರ ಇಲ್ಲ, ತಮ್ಮ ಕಾಲೇಜಿನಲ್ಲಿ ಮಕ್ಕಳಿಗೆ ಸೀಟು ಕೊಡಿಸುತ್ತೇನೆ ಎಂದು ಹೇಳಿ ಒಂದೇ ಒಂದು ಸೀಟು ಕೊಡಿಸಿಲ್ಲ. 10 ಸಾವಿರ ಮಂದಿಗೆ ಉದ್ಯೋಗ ಕೊಡಿಸುತ್ತೇನೆ ಎಂದು ಯಾರಿಗೂ ಉದ್ಯೋಗ ಕೊಡಿಸಿಲ್ಲ. ಗಾರ್ಮೆಂಟ್ಸ್ ಮಾಡಿ ಹೆಣ್ಣುಮಕ್ಕಳಿಗೆ ಉದ್ಯೋಗ ಕೊಡುತ್ತೇನೆ ಎಂದಿದ್ದರು, ಅದನ್ನೂ ಮಾಡಿಲ್ಲ ಎಂದು ಹರಿಹಾಯ್ದರು.
ರೈತರು ವಿದ್ಯುತ್ ಉತ್ಪಾದನೆ ಮಾಡಿದರೆ ಸರ್ಕಾರದಿಂದ ಸಹಾಯಧನ; ಜಿಲ್ಲಾಧಿಕಾರಿ
ಅವರ ಲೆಕ್ಕದಲ್ಲಿ ಅಭಿವೃದ್ಧಿ ಎಂದರೆ ಯುವಕರಿಗೆ ಎಣ್ಣೆ ಕುಡಿಸುವುದು, ಮಾಂಸ ತಿನ್ನಿಸುವುದು, 18-20 ವರ್ಷದ ಯುವಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗೋವಾ ಮತ್ತು ಥೈಲ್ಯಾಂಡ್ ಗೆ ಕರೆದುಕೊಂಡು ಹೋಗಿ ಹಾಳು ಮಾಡುತ್ತಿದ್ದಾರೆ. ಯುವಕರು ಥೈಲ್ಯಾಂಡ್ ಹಾಗೂ ಗೋವಾದಲ್ಲಿ ನೋಡುವುದು ಏನಿದೆ ಎಂದು ಜನರಿಗೆ ಗೊತ್ತು, ಯುವಕರನ್ನು ಹಾಳು ಮಾಡುತ್ತಿರುವ ಅವರಿಗೆ ಜನರು ಪಾಠ ಕಲಿಸುತ್ತಾರೆ ಎಂದು ಡಿ.ಸಿ ಗೌರಿಶಂಕರ್ ವಿರುದ್ಧ ಕಿಡಿಕಾರಿದರು.
ತುಮಕೂರು- ಜೋಗ ಜಲಪಾತ; KSRTC ವಿಶೇಷ ಟೂರ್ ಪ್ಯಾಕೇಜ್ ಘೋಷಣೆ
+ There are no comments
Add yours