ಕುಕ್ಕರ್ ಸ್ಪೋಟ; ಅಂಗನವಾಡಿ ಕಾರ್ಯಕರ್ತೆಗೆ ಗಾಯ

1 min read

Tumkurnews
ಪಾವಗಡ; ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಕುಕ್ಕರ್ ಸ್ಪೋಟಗೊಂಡು ಅಂಗನವಾಡಿ ಕಾರ್ಯಕರ್ತೆ ಗಾಯಗೊಂಡಿರುವ ಘಟನೆ ನಡೆದಿದೆ.

ಆಗಸ್ಟ್ 11ರಿಂದ 17ರವರೆಗೆ ದೇಶದ ಪ್ರತಿ‌ ಮನೆಯಲ್ಲೂ ರಾಷ್ಟ್ರದ್ವಜಾರೋಹಣಕ್ಕೆ ಕೇಂದ್ರ ಕರೆ; ಜಿಲ್ಲೆಯಲ್ಲಿ ಸಿದ್ಧತೆ ಆರಂಭ
ತಾಲೂಕಿನ ತಿರುಮಣಿ ವೃತ್ತದ ಕ್ಯಾತಗಾನಚರ್ಲು ಎರಡನೇ ಅಂಗನವಾಡಿ ಕೇಂದ್ರದಲ್ಲಿ ಕುಕ್ಕರ್ ಸ್ಪೋಟಗೊಂಡಿದ್ದು, ಅಂಗನವಾಡಿ ಕಾರ್ಯಕರ್ತೆ ಚಿಟ್ಟಿ ಎಂಬಾಕೆಗೆ ಸುಟ್ಟ ಗಾಯಗಳಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ನಡೆದು ಸುಮಾರು ಮೂರ್ನಾಲ್ಕು ದಿನ ಕಳೆದಿದೆಯಾದರೂ ಸಂಬಂಧಿಸಿದ ಸಿಡಿಪಿಓ ನಾರಾಯಣ್ ಹಾಗೂ ಮೇಲ್ವಿಚಾರಕಿ ವಿಜಯಲಕ್ಷ್ಮಿ ಅವರು ಸೌಜನ್ಯಕ್ಕೂ ಗಾಯಾಳುವನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಮಳೆ ಅವಾಂತರ; ವಿದ್ಯುತ್ ಸ್ಪರ್ಶಿಸಿ ಪಾವಗಡದ ವಾಟರ್ ಮ್ಯಾನ್ ಸಾವು
ತಾಲೂಕಿನ ತಿರುಮಣಿ ವೃತ್ತದಲ್ಲಿ ಸುಮಾರು 22 ಅಂಗನವಾಡಿ ಕೇಂದ್ರಗಳಿದ್ದು ಅವುಗಳಲ್ಲಿ 45 ಮಂದಿ ಕಾರ್ಯಕರ್ತರು ಮತ್ತು ಸಹಾಯಕಿಯರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಇತ್ತೀಚೆಗೆ ತಿರುಮಣಿಯ ವೃತ್ತದ ಕ್ಯಾತಗಾನ ಚರ್ಲು ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿ ಕರ್ತವ್ಯಕ್ಕೆ ಗೈರಾಗಿದ್ದ ಕಾರಣ ಕಾರ್ಯಕಾರ್ಯಕರ್ತೆ ಚಿಟ್ಟಿ ಅಡುಗೆ ಮಾಡುತ್ತಿದ್ದರು. ಈ ವೇಳೆ ಕುಕ್ಕರ್ ಸ್ಪೋಟಗೂಂಡಿದೆ. ಸದರಿ ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕಿ ಕಳೆದ ಎರಡು ತಿಂಗಳಿನಿಂದ ಕೆಲಸಕ್ಕೆ ಬಾರದಿದ್ದರೂ ಸಂಬಳ ನೀಡಿದ್ದಾರೆ ಎಂಬುದು ಆರೋಪವೂ ಸ್ಥಳೀಯರಿಂದ ಕೇಳಿಬಂದಿದೆ.
ವರದಿ; ಇಮ್ರಾನ್ ಉಲ್ಲಾ, ಪಾವಗಡ

About The Author

You May Also Like

More From Author

+ There are no comments

Add yours