ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ?; ಚುನಾವಣಾ ಆಯೋಗದಿಂದ ಮಹತ್ವದ ಸೂಚನೆ

1 min read

 

Tumkurnews
ತುಮಕೂರು; ಹಾಲಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಂಡಿರುವ ಮತದಾರರು ಸ್ವಯಂ ಪ್ರೇರಿತರಾಗಿ ತಮ್ಮ ಹೆಸರು, ವಿಳಾಸ ಇತ್ಯಾದಿಗಳನ್ನು ದೃಢೀಕರಿಸುವ ಸಲುವಾಗಿ ಆಧಾರ್ ಸಂಖ್ಯೆಯನ್ನು ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ನಮೂನೆ-6ಬಿ ರಲ್ಲಿ ಭರ್ತಿ ಮಾಡಿ ದೃಢೀಕರಿಸಲು ಭಾರತ ಚುನಾವಣಾ ಆಯೋಗವು ಸೂಚಿಸಿರುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು.

ತುಮಕೂರು- ಜೋಗ ಜಲಪಾತ; KSRTC ವಿಶೇಷ ಟೂರ್ ಪ್ಯಾಕೇಜ್ ಘೋಷಣೆ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ‘ಮತದಾರರ ವಿವರಗಳಿಗೆ ಆಧಾರ್ ನಂಬರ್ ಸಂಗ್ರಹಣೆ, ಜೋಡಣೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ’ ಕುರಿತು ಚರ್ಚಿಸಲು ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಈ ದೃಢೀಕರಣ ಕಾರ್ಯವು ಆಗಸ್ಟ್ 01, 2022ರಿಂದ ಮಾರ್ಚ್ 31, 2023 ರವರೆಗೆ ನಡೆಯಲಿದ್ದು, ಜಿಲ್ಲೆಯ ಎಲ್ಲಾ ನೋಂದಾಯಿತ ಮತದಾರರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆನ್‍ಲೈನ್, ಆಫ್‍ಲೈನ್ ಮೂಲಕ ನಮೂನೆ-6ಬಿ ರಲ್ಲಿ ತಮ್ಮ ಆಧಾರ್ ನಂಬರ್‌ ಗಳನ್ನು ನಮೂದಿಸಿ, ದೃಢೀಕರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ತುಮಕೂರು; ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ನಲ್ಲಿ ಆನ್‍ಲೈನ್ ಮೂಲಕ ಮೊಬೈಲ್, ಲ್ಯಾಪ್‍ಟಾಪ್, ಕಂಪ್ಯೂಟರ್‌ಗಳಲ್ಲಿ ಮತದಾದರರು ಸ್ವತಃ ತಾವೇ ಖುದ್ದು, ನಮೂನೆ-6ಬಿ ಯನ್ನು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಆಫ್‍ಲೈನ್ ಮೂಲಕ ದೃಢೀಕರಣ ನೀಡಲಿಚ್ಛಿಸುವ ಮತದಾರರು ನಮೂನೆ-6ಬಿಯನ್ನು ಭರ್ತಿಮಾಡಿ ಆಧಾರ್ ಕಾರ್ಡ್, ಮತ್ತು ಇತರೆ ದಾಖಲಾತಿಗಳ ಪ್ರತಿಯೊಂದಿಗೆ ಸಂಬಂಧಿಸಿದ ಬಿಎಲ್‍ಒ ಗಳಿಗೆ ಸಲ್ಲಿಸಬಹುದಾಗಿರುತ್ತದೆ.
ಇತರೆ ದಾಖಲಾತಿಗಳಾದ ನರೇಗಾ ಉದ್ಯೋಗ ಕಾರ್ಡ್, ಬ್ಯಾಂಕ್, ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್‍ಪುಸ್ತಕ, ಕಾರ್ಮಿಕ ಮಂತ್ರಾಲಯದ ಯೋಜನೆಯ ಅಡಿಯಲ್ಲಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್‍ಕಾರ್ಡ್, ಎನ್‍ಪಿಆರ್ ಅಡಿಯಲ್ಲಿ ಆರ್‍ಜಿಐ ಮೂಲಕ ನೀಡಲಾದ ಸ್ಮಾರ್ಟ್ ಕಾರ್ಡ್, ಇಂಡಿಯನ್ ಪಾಸ್‍ಪೋಟ್, ಭಾವಚಿತ್ರರವಿರುವ ಪಿಂಚಣಿ ದಾಖಲೆ, ಕೇಂದ್ರ, ರಾಜ್ಯ ಸರ್ಕಾರ ಸಾರ್ವಜನಿಕ ವಲಯದ ಉದ್ದಿಮೆಗಳು, ಸಾರ್ವಜನಿಕ ನಿಯಮಿತ ಕಂಪನಿಗಳಿಂದ ಉದ್ಯೋಗಿಗಳಿಗೆ ನೀಡಲಾದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಸಂಸತ್ ಸದಸ್ಯರು, ವಿಧಾನ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರುಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಮೂಲಕ ನೀಡಲಾದ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ) ದಾಖಲೆಗಳ ಪ್ರತಿಗಳೊಂದಿಗೆ ಬಿಎಲ್‍ಒಗಳಿಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಮಹಿಳೆಯರಿಗೆ ದಿನದ 24 ಗಂಟೆಯೂ ನೆರವು; ಸಿಇಒ ವಿದ್ಯಾಕುಮಾರಿ
ಜಿಲ್ಲೆಯಲ್ಲಿ 11,15,812 ಪುರುಷರು ಹಾಗೂ 11,13,805 ಮಹಿಳೆಯರು, 110 ಇತರೆ ಸೇರಿದಂತೆ ಒಟ್ಟು 22,29,727 ಮತದಾರರಿದ್ದಾರೆ. ಒಟ್ಟು ಜಿಲ್ಲೆಯ ಲಿಂಗಾನುಪಾತ ಸರಾಸರಿ 999 ಇರುತ್ತದೆ ಎಂದು ತಿಳಿಸಿದರು.
ಮತದಾರ ಪಟ್ಟಿಗೆ ಹೆಸರು ಸೇರ್ಪಡಿಕೆ ಅವಧಿಯನ್ನು ವರ್ಷದಲ್ಲಿ 4 ಬಾರಿ ನಿಗದಿ ಪಡಿಸಲಾಗಿದ್ದು, 18 ವರ್ಷ ತುಂಬಿದ ಯುವಕ, ಯುವತಿಯರು ಜನವರಿ 01, ಏಪ್ರಿಲ್ 01, ಜುಲೈ 01 ಮತ್ತು ಅಕ್ಟೋಬರ್ 01 ರಂದು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.

ಕಳ್ಳರ ಪಾಲಿನ ಸ್ವರ್ಗ; ತುಮಕೂರು KSRTC ಬಸ್ ನಿಲ್ದಾಣ!
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಕೆ.ಚನ್ನಬಸಪ್ಪ, ನೋಂದಾಯಿತ ಮಾನ್ಯತೆ ಪಡೆದ ಪಕ್ಷಗಳ ಪಧಾಧಿಕಾರಿಗಳು ಹಾಗೂ ಪ್ರತಿನಿಧಿಗಳು ಹಾಜರಿದ್ದರು.

About The Author

You May Also Like

More From Author

+ There are no comments

Add yours