ACB ದಾಳಿ; ಲಂಚ ಸ್ವೀಕರಿಸುತ್ತಿದ್ದ ಮಧುಗಿರಿ ಎ.ಸಿ ಕಚೇರಿಯ ಎಫ್.ಡಿ.ಎ ಬಂಧನ

1 min read

Tumkurnews
ತುಮಕೂರು; ಜಮೀನಿನ ಖಾತೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಧುಗಿರಿ ಉಪ ವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೋಹನ್ ಕುಮಾರ್ ಎಲ್. ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಕಳ್ಳರ ಪಾಲಿನ ಸ್ವರ್ಗ; ತುಮಕೂರು KSRTC ಬಸ್ ನಿಲ್ದಾಣ!
ಶಿರಾ ತಾಲ್ಲೂಕು ಬುಕ್ಕಾಪಟ್ಡಣದ ನಿವಾಸಿಯೋರ್ವರು ಸಿವಿಲ್ ನ್ಯಾಯಾಲಯದ ಡಿಕ್ರಿ ಆದೇಶದಂತೆ ತಮ್ಮ ತಂದೆ ಹೆಸರಿಗೆ ಶಿರಾ ತಾಲ್ಲೂಕು ಮಾದೇನಹಳ್ಳಿ ಸರ್ವೆ ನಂಬರ್ 34/2ರ ಜಮೀನಿನ ‌ಖಾತೆಗಾಗಿ ಶಿರಾ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಕಡತವು ಶಿರಾ ತಾಲ್ಲೂಕು ಕಚೇರಿಯಿಂದ ಮಧುಗಿರಿ ಎ.ಸಿ ಕಚೇರಿಗೆ ತಲುಪಿತ್ತು. ಈ ಎ.ಸಿ ಕಚೇರಿಯ ಎಫ್.ಡಿ.ಎ ಮೋಹನ್ ಕುಮಾರ್ ಎಲ್., ಎಂಬಾತ ಸದರಿ ಜಮೀನಿನ ಖಾತೆ ಮಾಡಿಕೊಡಲು ಅರ್ಜಿದಾರರಿಂದ 3 ಸಾವಿರ ರೂ., ಲಂಚಕ್ಕೆ ಬೇಡಿಕೆ ಇರಿಸಿದ್ದನು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ತುಮಕೂರು ಭ್ರಷ್ಟಾಚಾರ ನಿಗ್ರಹದಳ (ಎ.ಸಿ.ಬಿ)ಕ್ಕೆ ದೂರು ಸಲ್ಲಿಸಿದ್ದರು.

KSRTC ಬಸ್ ಅಪಘಾತ; ಶಿರಾದಲ್ಲಿ ತಪ್ಪಿದ ಭಾರಿ‌ ಅನಾಹುತ
ದೂರು ಸ್ವೀಕರಿಸಿ ಕಾರ್ಯಾಚರಣೆ ನಡೆಸಿದ ಎ.ಸಿ.ಬಿ ಅಧಿಕಾರಿಗಳು, ಮಂಗಳವಾರ ಮಧುಗಿರಿ ಟೌನ್ ಸಿವಿಲ್ ಬಸ್ ಸ್ಟಾಂಡ್‌ನಲ್ಲಿರುವ ಮಾರುತಿ ಟೀ ಸ್ಟಾಲ್ ಬಳಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಆರೋಪಿ ಮೋಹನ್ ಕುಮಾರ್ ಎಲ್. ನನ್ನು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ.

About The Author

You May Also Like

More From Author

+ There are no comments

Add yours