‘ಇಂಗ್ಲೀಷ್ ಕಲಿತರೆ ಮಾತ್ರ ಹೊಟ್ಟೆಪಾಡು’; ಕನ್ನಡಿಗರು ಭ್ರಮೆಯಿಂದ ಹೊರ ಬರಲಿ ಎಂದ ಮನು ಬಳಿಗಾರ್

1 min read

Tumkurnews
ತುಮಕೂರು; ಇಂಗ್ಲೀಷ್ ಭಾಷೆಯಲ್ಲಿರುವುದು ಮಾತ್ರ ಜ್ಞಾನ, ಇಂಗ್ಲೀಷ್ ಕಲಿತರೆ ಮಾತ್ರ ಹೊಟ್ಟೆಪಾಡು ನೀಗಿಸಬಹುದು ಎಂಬ ಭ್ರಮೆಯಿಂದ ಕನ್ನಡಿಗರು ಹೊರಬರುವವರೆಗೂ ಇಂತಹ ಕನ್ನಡ ಜಾಗೃತಿ ಕಾರ್ಯಕ್ರಮಗಳ ಅಗತ್ಯತೆ ಇದೆ ಎಂದು ಕಸಾಪ ಮಾಜಿ ಅಧ್ಯಕ್ಷ, ನಾಡೋಜ ಡಾ.ಮನು ಬಳಿಗಾರ್ ಅಭಿಪ್ರಾಯಪಟ್ಟರು.

ಶೇಷಾದ್ರಿಪುರಂ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ
ನಗರದ ಕನ್ನಡ ಭವನದಲ್ಲಿ ಕೆ.ಎಸ್.ಆರ್.ಟಿ.ಸಿ ಕನ್ನಡ ಕ್ರಿಯಾ ಸಮಿತಿಯಿಂದ ಆಯೋಜಿಸಿದ್ದ ಕನ್ನಡ ಜಾಗೃತಿ ಕಾರ್ಯಕ್ರಮ, ವಿ.ಡಿ.ಹನುಮಂತರಾಯ ವಿರಚಿತ ಕೃತಿ ಬದುಕಿಗಾಗಿ ಬವಣೆ ಕೃತಿ ಬಿಡುಗಡೆ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು‌.
ಹುಯಿಲುಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು, ಕುವೆಂಪು ಅವರ ಬಾರಿಸು ಕನ್ನಡಿ ಡಿಂಡಿಮ ಎನ್ನುವ ಗೀತೆಗಳು ಹಿಂದೆಂದಿಗಿಂತಲು ಇಂದು ಅತಿ ಅಗತ್ಯವಾಗಿವೆ. ಕನ್ನಡ ಭಾಷೆ ಎರಡೂವರೆ ಸಾವಿರ ವರ್ಷಗಳ ಇತಿಹಾಸ ಇರುವ ಭಾಷೆ, ಕನ್ನಡ ಮಾಧ್ಯಮದಲ್ಲಿಯೇ ಓದಿದ ಅನೇಕ ಮಹನೀಯರು ವಿಜ್ಞಾನಿಗಳಾಗಿ, ಐಎಎಸ್ ಅಧಿಕಾರಿಗಳಾಗಿ, ಉತ್ತಮ ವೈದ್ಯರಾಗಿ ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಅವರು ನಮಗೆ ಸ್ಪೂರ್ತಿಯಾಗಬೇಕು. ಅಲ್ಲದೆ ಕಸಾಪ ಮತ್ತು ಕನ್ನಡಪರ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ಶೇ.5 ರ ಮೀಸಲಾತಿಯನ್ನು ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ನೀಡಲಾಗಿದೆ. ನಾವುಗಳು ಇಂಗ್ಲೀಷ್ ಭ್ರಮೆಯಿಂದ ಹೊರ ಬಂದು, ಕನ್ನಡ ಭಾಷೆ ಬಗೆಗಿನ ನಿರ್ಲಕ್ಷವನ್ನು ಕೈಬಿಡದಿದ್ದರೆ, ಕನ್ನಡ ಕಾವಲು ಸಮಿತಿ, ಗಡಿನಾಡ ಕನ್ನಡ ಸಮಿತಿ ಯಂತಹ ನೂರಾರು ಸಮಿತಿಗಳು ಅಸ್ಥಿತ್ವಕ್ಕೆ ಬಂದರೂ ಪ್ರಯೋಜನವಾಗುವುದಿಲ್ಲ ಎಂದು ಡಾ.ಮನು ಬಳಿಗಾರ್ ನುಡಿದರು.

ಕೊನೆಗೂ ಮಾಲೀಕರ ಮನೆ ಸೇರಿದ ಆಫ್ರಿಕನ್ ಗಿಣಿ; ಸಿಕ್ಕ ಬಹುಮಾನವೆಷ್ಟು ಗೊತ್ತೇ?
ಕನ್ನಡ ಸಾಹಿತ್ಯ ಅತ್ಯಂತ ಶ್ರೇಷ್ಟವಾದದ್ದು, ಇದರಲ್ಲಿ ವೈಚಾರಿಕತೆ, ವೈಜ್ಞಾನಿಕ, ಬಂಡಾಯ, ಸಮಾನತೆ, ಸೌಹಾರ್ಧತೆ ಎಲ್ಲವು ಇದೆ. ಮನುಷ್ಯ ತಾನೋಂದೇ ವಲಂ ಎಂದ ಪಂಪ, ಮನುಜ ಮತ, ವಿಶ್ವಪಥ ಎಂದ ಕುವೆಂಪು, ಬದಕನ್ನೇ ಅನುಭವ ಕಥನವಾಗಿಸಿದ ಸಂತ ಶಿಶುನಾಳ ಷರೀಫ್ ಇವರುಗಳು ನಮ್ಮ ಮಕ್ಕಳಿಗೆ ಮಾದರಿಯಾಗಬೇಕು. ಸೌಹಾರ್ಧತೆ ಎಂಬುದು ಈ ನಾಡಿನ ಗುರುತು. ಇದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸ ಆಗಬೇಕಿದೆ ಎಂದು ಡಾ.ಮನುಬಳಿಗಾರ್ ಪ್ರತಿಪಾದಿಸಿದರು.

ತುಮಕೂರು; ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕನ್ನಡ ಜಾಗೃತಿ ನುಡಿಗಳನ್ನಾಡಿದ ಕೆ.ಎಸ್.ಆರ್.ಟಿ.ಸಿ. ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ, ಭಾರತದಲ್ಲಿ ನೂರಾರು ಭಾಷೆಗಳಿದ್ದರೂ ಲಿಪಿಯನ್ನು ಪಡೆದ ಮೊದಲ ಭಾಷೆ ಕನ್ನಡ, ಇದನ್ನು ಗುರುತಿಸಿಯೇ ವಿನೋಭಾ ಭಾವೆ ಅವರು ಕನ್ನಡ ಬರಹವನ್ನು ಲಿಪಿಗಳ ರಾಣಿ ಎಂದು ಕರೆದಿದ್ದಾರೆ. ದೇಶದಲ್ಲಿ ಒಂದು ವರ್ಷಕ್ಕೆ 6000ಕ್ಕೂ ಹೆಚ್ಚು ಕೃತಿಗಳು ಲೋಕಾರ್ಪಣೆಗೊಳ್ಳುತ್ತಿದ್ದು, ಅವುಗಳ ಕನ್ನಡ ಭಾಷೆಯ ಕೃತಿಗಳ ಸಂಖ್ಯೆಯೇ ಅಧಿಕ. ಕನ್ನಡಿಗರು ಭಾಷಾಭಿಮಾನವನ್ನು ನಾವು ದಕ್ಷಿಣ ಭಾರತದ ಇತರೆ ರಾಜ್ಯಗಳನ್ನು ನೋಡಿ ಕಲಿಯಬೇಕಿದೆ. ಪ್ರಧಾನಮಂತ್ರಿ, ರಾಷ್ಟ್ರಪತಿಯೇ ಬಂದರೂ ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯದ ಅಧಿಕೃತ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಅದಕ್ಕೆ ತದ್ವಿರುದ್ದ ನಡವಳಿಕೆಗಳಿವೆ. ಹಿಂದಿ ಮತ್ತು ಇಂಗ್ಲಿಷನ್ನು ರಾಷ್ಟ್ರದ ಆಡಳಿತ ಭಾಷೆಯನ್ನಾಗಿಸಿದ ಸಂವಿಧಾನದ ವಿಧಿ 343ನ್ನು ರದ್ದು ಗೊಳಿಸಲು ಹಿಂದಿಯೇತರ ರಾಜ್ಯಗಳ ಸಂಸದರು ದ್ವನಿ ಎತ್ತಬೇಕಾಗಿದೆ. ಈ ನಿಟ್ಟಿನಲ್ಲಿ ಹೋರಾಟ ಅನಿವಾರ್ಯ ಎಂದರು.

ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ವಿ.ಡಿ.ಹನುಮಂತರಾಯ ಅವರು ಬರೆದಿರುವ ಬದುಕಿಗಾಗಿ ಬವಣೆ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್, ಬದುಕಿಗಾಗಿ ಬವಣೆ ಕೃತಿ 12 ಕಥೆಗಳನ್ನು ಒಳಗೊಂಡಿದ್ದು, ನಗರ ಮತ್ತು ಹಳ್ಳಿಗಾಡಿನಲ್ಲಿ ನಡೆಯುವ ಘಟನೆಗಳನ್ನು ತುಮಕೂರು ಭಾಗದ ಆಡು ಭಾಷೆಯಲ್ಲಿ ಹನುಮಂತರಾಯಪ್ಪ ದಾಖಲಿಸಿದ್ದಾರೆ. ಇದು ಅವರೊಬ್ಬರ ಮನದಾಳದ ಮಾತುಗಳಲ್ಲ. ನಮ್ಮ ನಿಮ್ಮೆಲ್ಲರ ಬದುಕಿನ ಬವಣೆಗಳಾಗಿವೆ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುವುದಲ್ಲದೆ, ವಾಸ್ತವ ಚಿತ್ರಣವನ್ನು ಮುಂದಿಡುತ್ತವೆ. ಇಂತಹ ಪುಸ್ತಕಗಳು ನಮ್ಮೊಳಗಿರುವ ಶಿಕ್ಷಣವಂತರನ್ನು ಪ್ರಜ್ಞಾವಂತರನ್ನಾಗಿಸಲಿ ಎಂದರು.
ಕೃತಿಯ ಕುರಿತು ಮಾತನಾಡಿದ ಕನ್ನಡ ಉಪನ್ಯಾಸಕ ಹೆಚ್.ಗೋವಿಂದಯ್ಯ, ಹಳ್ಳಿಗಾಡಿನ ಬದುಕನ್ನು ಜನತೆಯ ಮುಂದಿಡುವ ಪ್ರಯತ್ನವನ್ನು ವಿ.ಡಿ.ಹನುಮಂತರಾಯಪ್ಪ ಮಾಡಿದ್ದಾರೆ. ತಮ್ಮ ಕೆಲಸದ ಒತ್ತಡದ ನಡುವೆಯೂ ತಾವು ಸುತ್ತಮತ್ತಲಿನ ಘಟನೆಗಳಿಗೆ ಪದದ ರೂಪ ನೀಡಿ, ಓದುಗರ ಮುಂದಿಟ್ಟು, ವಾಸ್ತವ ಬದುಕಿನ ಪರಿಚಯ ಮಾಡಿಸಿರುವ ಅವರಿಂದ ಮತ್ತಷ್ಟು ಉತ್ಕೃಷ್ಟ ಕೃತಿಗಳು ಹೊರಬರಲಿ ಎಂದು ಶುಭ ಹಾರೈಸಿದರು.

ಕಳ್ಳರ ಪಾಲಿನ ಸ್ವರ್ಗ; ತುಮಕೂರು KSRTC ಬಸ್ ನಿಲ್ದಾಣ!
ವೇದಿಕೆಯಲ್ಲಿ ಬದುಕಿಗಾಗಿ ಬವಣೆ ಕೃತಿ ಬರಹಗಾರರಾದ ವಿ.ಡಿ ಹನುಮಂತರಾಯ, ಕಸಾಪ ಮಾಜಿ ಅಧ್ಯಕ್ಷೆ ಬಾ.ಹ ರಮಾಕುಮಾರಿ, ಸಾಹಿತಿ ಜಯದೇವಯ್ಯ, ಕುವೆಂಪು ಪ್ರಕಾಶ್, ನಿವೃತ್ತ ಡಿ.ಎಂ.ಎ ಪಕೃದ್ದೀನ್, ಎಂ.ಗೋಪಿನಾಥ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಂ.ಗೋಪಿನಾಥ್, ವಿ.ಮಲ್ಲೇಶಯ್ಯ, ಮುರುಳಿಕೃಷ್ಣಪ್ಪ, ಎ.ಸಿ.ಮಹದೇವಪ್ಪ, ಎ.ಎಂ.ನಾಗರಾಜರಾವ್, ಡಿ.ಎನ್.ವಿಜಯಲಕ್ಷ್ಮಮ್ಮ, ಕೆ.ಜಿ.ಪಂಕಜ, ಎನ್.ಎ.ರಮೇಶ್, ವಿ.ನಾಗರಾಜ್ ಗಾಣದಹುಣಸೆ, ನರಸಿಂಹರಾಜು, ಡಿ.ಆರ್.ಮಂಜು ನಾಥ್ ಅವರುಗಳನ್ನು ಅಭಿನಂದಿಸಲಾಯಿತು.
ಮಧುಗಿರಿ ತಾಲೂಕು ಸಿದ್ದಾಪುರದ ತಿಪ್ಪೇಸ್ವಾಮಿ ಭಜನಾ ತಂಡದಿಂದ ತತ್ವಪದಗಳ ಗಾಯನ ನಡೆಯಿತು.

ತುಮಕೂರು- ಜೋಗ ಜಲಪಾತ; KSRTC ವಿಶೇಷ ಟೂರ್ ಪ್ಯಾಕೇಜ್ ಘೋಷಣೆ

About The Author

You May Also Like

More From Author

+ There are no comments

Add yours