ವಿವೇಕಾನಂದರ ವಾಣಿಯೇ ಭಾರತದ ಬಹುದೊಡ್ಡ ಭರವಸೆ; ಟಿ.ಬಿ ಜಯಚಂದ್ರ

1 min read

Tumkurnews
ಶಿರಾ; ‘ಉಪನಿಷತ್ತುಗಳ ಪ್ರತಿಧ್ವನಿಯಾದ ಸ್ವಾಮಿ ವಿವೇಕಾನಂದರ ವಾಣಿಯೇ ಭಾರತೀಯ ಭವಿಷ್ಯದ ಬಹುದೊಡ್ಡ ಭರವಸೆಯಾಗಿದೆ. ಹಿಂದೂಗಳಾದ ನಮಗೆ ಪುರಾತನವಾದ ಚರಿತ್ರೆಯಿದ್ದು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ದರಿದ್ರನಾರಾಯಣ ಸೇವೆಯು ಸಮಾಜದ ಎಲ್ಲ ಸಂಕುಚಿತತೆಯ ಗೋಡೆಗಳನ್ನು ಛಿದ್ರಗೊಳಿಸಿ ಸಮಗ್ರ ವಿಶ್ವದ ಒಳಿತಿಗೆ ಪೂರಕವಾಗಬಲ್ಲದು’ ಎಂದು ಮಾಜಿ ಸಚಿವ ಟಿ.ಬಿ ಜಯಚಂದ್ರ ಅಭಿಪ್ರಾಯಪಟ್ಟರು.

ಮಹಿಳಾ ಅಭಿವೃದ್ಧಿ ನಿಗಮದಿಂದ ಬಡ್ಡಿ ರಹಿತ ಸಾಲ; ಅರ್ಜಿ ಆಹ್ವಾನ
ಶಿರಾ ನಗರದ ಶ್ರೀ ಬಾಲಾಜಿ ಕಲ್ಯಾಣಮಂಟಪದಲ್ಲಿ ರಾಮಕೃಷ್ಣ-ವಿವೇಕಾನಂದ ಆಶ್ರಮ ಮತ್ತು ರಾಮಕೃಷ್ಣ ಶಾರದಾ ಸತ್ಸಂಗ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ವಿದ್ಯಾರ್ಥಿ ದೇವೋಭವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಳೆದ ಎರಡೂವರೆ ದಶಕದಿಂದ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಕಾರ್ಯವೈಖರಿಯನ್ನು ಸಮೀಪದಿಂದ ಗಮನಿಸುತ್ತಿರುವೆ. ಆಶ್ರಮವು ಪ್ರಸರಣಗೈಯುತ್ತಿರುವ ದಿವ್ಯತ್ರಯರ ಚಿಂತನೆಗಳು ಮಾನವ ಬದುಕನ್ನು ಉತ್ತಮವಾಗಿಸಲು ಅತ್ಯವಶ್ಯಕವಾದ ಸಚ್ಚಿನ್ತನೆಯನ್ನು ಒದಗಿಸುವ ಕ್ಲಿನಿಕ್ ಗಳಾಗಿದೆ. ಹಳ್ಳಿ-ಪಟ್ಟಣಗಳೆನ್ನದೆ ಜಗತ್ತಿನಾದ್ಯಂತ ಆದರ್ಶ ಮನುಷ್ಯನಿರ್ಮಾಣಕ್ಕೆ ಕಟಿಬದ್ಧವಾಗಿ ಶ್ರಮಿಸುತ್ತಿರುವ ರಾಮಕೃಷ್ಣಾಶ್ರಮಗಳು ಕೋಮು ಸಾಮರಸ್ಯವನ್ನು ಸ್ಥಾಪಿಸಲು ನೇತೃತ್ವ ವಹಿಸಬೇಕಿದೆ. ಶಿರಾ ತಾಲ್ಲೂಕಿನಲ್ಲಿ ಆಶ್ರಮವು ಅತ್ಯಂತ ಪರಿಣಾಮಕಾರಿಯಾಗಿ ಸೇವಾಕಾರ್ಯಗಳನ್ನು ನೆರವೇರಿಸುತ್ತಿದ್ದು ಅಪಾರ ಜನರ ಗೌರವಾದರಗಳಿಗೆ ಪಾತ್ರವಾಗಿರುವುದು ಸ್ತುತ್ಯಾರ್ಹ’ ಎಂದರು.

ಉದ್ಯೋಗಿನಿ ಯೋಜನೆ; 3 ಲಕ್ಷ ರೂ. ಸಾಲ, 1.50 ಲಕ್ಷ ರೂ. ಸಬ್ಸಿಡಿ! ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ
ವಿಶೇಷ ಉಪನ್ಯಾಸ ನೀಡಿದ ರಾಮಕೃಷ್ಣಾಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀರವರು ಮಾತನಾಡಿ, ‘ವಿದ್ಯಾಭ್ಯಾಸವೆಂಬುದೊಂದು ವ್ರತ; ವಿದ್ಯಾರ್ಥಿಗಳು ವಿದ್ಯಾಭ್ಯಾಸದ ವ್ರತಧಾರಿಗಳಾದರೆ ಶಿಕ್ಷಕರು ವಿದ್ಯಾದಾನದ ವ್ರತಧಾರಿಗಳೆನಿಸುತ್ತಾರೆ. ವಿದ್ಯಾರ್ಥಿಗಳು ಮಾತಾಪಿತೃಗಳ ಮತ್ತು ಶಿಕ್ಷಕರ ಮಾರ್ಗದರ್ಶನದ ಜೊತೆಗೆ ಸ್ವಭಾವ ಸಹಜವಾದ ಶಿಸ್ತು ಹಾಗು ವಿಧೇಯತೆಗಳನ್ನು ಮೈಗೂಡಿಸಿಕೊಂಡು ಸಮಯದ ಸದುಪಯೋಗಕ್ಕೆ ಮುಂದಾಗಬೇಕು. ಆಗಷ್ಟೇ ಜೀವನ ಸಾಥ್ರ್ಯಕ್ಯ ಗಳಿಸಿ ಮಹೋನ್ನತ ವ್ಯಕ್ತಿಗಳಾಗಲು ಸಾಧ್ಯ. ವಿದ್ಯಾರ್ಥಿಗಳು ಕಾಮವನ್ನು ಕೆರಳಿಸುವ ಸನ್ನಿವೇಶಗಳಿಂದ ದೂರವಿರಬೇಕು. ಆಹಾರ, ನಿದ್ರೆ ಹಾಗು ವಿಹಾರಗಳ ವಿಷಯದಲ್ಲಿ ಸಭ್ಯತೆ ಹಾಗು ಶಿಷ್ಟಾಚಾರಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ’ ಎಂದರು.

18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಲಭ್ಯ; ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ
ಸ್ವಾಮೀಜಿಯವರು ಮುಂದುವರೆದು, ‘ಇಂದಿನ ಶಿಕ್ಷಣವು ನಮ್ಮ ಮಕ್ಕಳಲ್ಲಿ ಸ್ವಂತಿಕೆಯನ್ನು ಮೂಡಿಸಬೇಕು, ಸಹಬಾಳ್ವೆಯನ್ನು ದೊರಕಿಸಿಕೊಡಬೇಕು, ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ಬದುಕುವುದನ್ನು ಕಲಿಸಿ ದೇಶದ ಏಕತೆ ಮತ್ತು ಸಮಗ್ರತೆಗೆ ಹಾಗು ಜಗತ್ತಿಗೆ ವಿಶೇಷ ಕೊಡುಗೆ ನೀಡಬಲ್ಲ ವ್ಯಕ್ತಿರತ್ನಗಳನ್ನಾಗಿ ರೂಪಿಸಬೇಕು. ಆಗಷ್ಟೇ ಶಿಕ್ಷಕರು ಮಕ್ಕಳನ್ನು ಮಾನವ ಸಂಪನ್ಮೂಲವಾಗಿ ರೂಪಿಸಿ ಸ್ವಾತಂತ್ರ್ಯದ ಮಹಾಮೌಲ್ಯವನ್ನು ಮನವರಿಕೆ ಮಾಡಿಕೊಟ್ಟಂತ್ತಾಗುತ್ತದೆ’ ಎಂದರು.
ವಿದ್ಯಾರ್ಥಿದೇವೋಭವ ಕಾರ್ಯಕ್ರಮದಲ್ಲಿ ಶಿರಾ ನಗರದ ಎಲ್ಲಾ ಪ್ರೌಢಶಾಲೆಗಳಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಂದು ಸಹಸ್ರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬೆಂಗಳೂರಿನ ರಾಮಕೃಷ್ಣ ಮುಖ್ಯಸ್ಥ ಓಂಕಾರ ಆಶ್ರಮದ ಸ್ವಾಮಿ ಶಾಂತಾನಂದ ಸರಸ್ವತೀ ಮತ್ತು ಶಿರಾದ ಸಮಾಜ ಸೇವಕ ಶ್ಯಾಮ್ ಸಿಂಗ್ ವೇದಿಕೆಯಲ್ಲಿದ್ದರು.

ಚಿತ್ರ; ಶಿರಾ ನಗರದ ಶ್ರೀ ಬಾಲಾಜಿ ಕಲ್ಯಾಣಮಂಟಪದಲ್ಲಿ ರಾಮಕೃಷ್ಣ-ವಿವೇಕಾನಂದ ಆಶ್ರಮ ಮತ್ತು ರಾಮಕೃಷ್ಣ ಶಾರದಾ ಸತ್ಸಂಗ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಏರ್ಪಾಡಾಗಿದ್ದ ‘ವಿದ್ಯಾರ್ಥಿ ದೇವೋಭವ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ಟಿ.ಬಿ ಜಯಚಂದ್ರ ಅವರನ್ನು ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀರವರು ಸನ್ಮಾನಿಸಿದರು.

About The Author

You May Also Like

More From Author

+ There are no comments

Add yours