ತುಮಕೂರು ವಿವಿ ನೂತನ ಕುಲಪತಿಗಳಾಗಿ ಪ್ರೊ.ವೆಂಕಟೇಶ್ವರಲು ಅಧಿಕಾರ ಸ್ವೀಕಾರ

1 min read

 

Tumkurnews
ತುಮಕೂರು; ತುಮಕೂರು ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಪ್ರೊ.ವೆಂಕಟೇಶ್ವರಲು ನೇಮಕಗೊಂಡಿದ್ದು, ಬುಧವಾರ ಅವರು ಅಧಿಕಾರ ಸ್ವೀಕರಿಸಿದರು.
ರಾಜ್ಯಪಾಲರ ನೇಮಕ ಆದೇಶದ ಹಿನ್ನೆಲೆಯಲ್ಲಿ
ತುಮಕೂರು ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಪ್ರೊ.ವೆಂಕಟೇಶ್ವರಲು ಬುಧವಾರ ಪ್ರಭಾರ ಕುಲಪತಿ ಕೇಶವ ಅವರಿಂದ ಅಧಿಕಾರ ಸ್ವೀಕರಿಸಿದರು.
ಬಲಗಾಲಿಟ್ಟು ಬಂದರು; ಪ್ರೊ.ವೆಂಕಟೇಶ್ವರಲು ವಿವಿ ಬಾಗಿಲಿಗೆ ನಮಸ್ಕರಿಸಿ, ಬಲಗಾಲಿಟ್ಟು ಒಳಗೆ ಬರುವ ಮೂಲಕ ಗಮನ ಸೆಳೆದರು. ಕುವೆಂಪು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಅವರು, ಐದನೇ ಕುಲಪತಿಯಾಗಿ ತುಮಕೂರು ವಿವಿಗೆ ನೇಮಕಗೊಂಡಿದ್ದಾರೆ. ಪ್ರೊ. ವೆಂಕಟೇಶ್ವರಲು ತುಮಕೂರು ವಿವಿಯಲ್ಲಿ ಈ ಹಿಂದೆ ಕುಲಸಚಿವರಾಗಿ ಕರ್ತವ್ಯ ‌ನಿರ್ವಹಿಸಿದ್ದರು.

About The Author

You May Also Like

More From Author

+ There are no comments

Add yours