ಅಕ್ರಮ ನಾಡ ಬಂದೂಕು ತಯಾರಿ; ಆರೋಪಿಗಳ ಬಂಧನ

1 min read

 

Tumkur News
ತುಮಕೂರು: ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಚಟುವಟಿಕೆ ಕ್ಯಾತ್ಸಂದ್ರ ಪೊಲೀಸರ ಕಾರ್ಯಾಚರಣೆಯಲ್ಲಿ ಹೊರಬಂದಿದೆ.

ಊರ್ಡಿಗೆರೆ ಹೋಬಳಿ ದುರ್ಗದ ಹಳ್ಳಿಯಲ್ಲಿ ಅಕ್ರಮವಾಗಿ ನಾಡ ಬಂದು ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಾಡ ಬಂದೂಕು ತಯಾರಿಸುತ್ತಿದ್ದ ಆರೋಪಿ ಕೃಷ್ಣಪ್ಪನ ಮನೆಯ ಮೇಲೆ ಕ್ಯಾತ್ಸಂದ್ರ ಪೊಲೀಸರು ದಾಳಿ ನಡೆಸಿದರು.

ಕೆ.ಎನ್. ರಾಜಣ್ಣ ಹೇಳಿಕೆ ವಿರೋಧಿಸಿ ಪ್ರತಿಭಟನೆ

ನಾಡ ಬಂದೂಕುಗಳ ತಯಾರಿ, ರಿಪೇರಿ ಹಾಗೂ ಸಿಡಿಮದ್ದುಗಳನ್ನು ಕೃಷ್ಣಪ್ಪ ಮಾರಾಟ ಮಾಡುತ್ತಿದ್ದ. ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ನಾಡ ಬಂದೂಕು ತಯಾರಿಕೆಯಲ್ಲಿ ತೊಡಗಿದ್ದನು. ಆರೋಪಿ ಕೃಷ್ಣಪ್ಪ ಸೇರಿದಂತೆ ಅವನಿಂದ ಬಂದೂಕು ಖರೀದಿಸಿದ ಎಂಟು ಜನರನ್ನು ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ.

ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಕ್ಯಾತ್ಸಂದ್ರ ಪಿಎಸ್ಐ ಓಂಕಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳನ್ನು ಬಂಧಿಸಿದ ಪೋಲಿಸಿ ಸಿಬ್ಬಂದಿಗಳನ್ನು ಎಸ್ ಪಿ ರಾಹುಲ್ ಕುಮಾರ್ ಅಭಿನಂದಿಸಿದ್ದಾರೆ.

You May Also Like

More From Author

+ There are no comments

Add yours