ಹೆಚ್‌ಐವಿ ನಿಯಂತ್ರಣ ಸಮಾಲೋಚಕನಿಗೆ ಕಾರು ಡಿಕ್ಕಿ

1 min read

 

Tumkur News
ಕುಣಿಗಲ್ : ಹೆಚ್‌ಐವಿ ಸೋಂಕಿತರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಗೆ ವಾಪಸಾಗುತ್ತಿದ್ದ ಹೆಚ್‌ಐವಿ ನಿಯಂತ್ರಣ ಸಮಾಲೋಚಕನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾಲು ನಜ್ಜು ಗುಜ್ಜಾಗಿರುವ ಘಟನೆ ಗುರುವಾರ ರಾಜ್ಯ ಹೆದ್ದಾರಿ 33ರ ಟಿ.ಎಂ ರಸ್ತೆ ಪಟ್ಟಣದ ಚಿಕ್ಕಕೆರೆ ಏರಿ ಮೇಲೆ ಸಂಭವಿಸಿದೆ.

ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ಕುಣಿಗಲ್ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಹೆಚ್‌ಐವಿ ನಿಯಂತ್ರಣ ಸಮಾಲೋಚಕ ಉಮೇಶ್ ಚಂದ್ರ (42) ಕಾಲು ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ.

ರಸ್ತೆ ಅಪಘಾತ; ಪತ್ನಿ ಮಡಿಲಲ್ಲಿ ಪತಿ ಸಾವು

ಸಂತೇಮಾವತ್ತೂರು ಸಮೀಪದ ಗ್ರಾಮದಲ್ಲಿ ಹೆಚ್‌ಐವಿ ಸೋಂಕಿತ ವ್ಯಕ್ತಿಯು ದೂರವಾಣಿ ಕರೆ ಸ್ವೀಕರಿಸದ ಹಿನ್ನಲೆ, ಉಮೇಶ್‌ಚಂದ್ರ ಅವರು ಸೋಂಕಿತ ವ್ಯಕ್ತಿಯ ಮನೆಗೆ ಬೈಕ್‌ನಲ್ಲಿ ಹೊಗಿ ಚಿಕಿತ್ಸೆ ನೀಡಿ ಕುಣಿಗಲ್‌ಗೆ ವಾಪಸ್ಸ್ ಆಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕುಣಿಗಲ್ ಕಡೆಯಿಂದ ಹುಲಿಯೂರುದುರ್ಗ ಕಡೆ ಹೋಗುತ್ತಿದ್ದ ಕಾರು ಉಮೇಶ್ ಚಂದ್ರ ಬೈಕ್‌ಗೆ ಡಿಕ್ಕಿ ಹೊಡೆದು ಕಾರಿನ ಚಕ್ರ ಕಾಲಿನ ಮೇಲೆ ಹರಿದ ಪರಿಣಾಮ ಬಲಗಾಲು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅವರನ್ನು ಅಂಬುಲೆನ್ಸ್ ನಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಡಿಕ್ಕಿ ಹೊಡೆದ ಕಾರಿನ ಚಾಲಕ ಮದ್ಯಪಾನ ಮಾಡಿದ್ದು ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

You May Also Like

More From Author

+ There are no comments

Add yours