Tumkur News
ಸಿರಿಧಾನ್ಯ ಬೆಳೆಯುವ ರೈತರಿಗೆ ಬೆಳೆ ಸಮೀಕ್ಷೆಯ ವಿಸ್ತೀರ್ಣದ ಆಧಾರದ ಮೇರೆಗೆ ಪ್ರತಿ ಹೆಕ್ಟೇರ್ ಗೆ 6,000 ರೂಗಳನ್ನು ಗರಿಷ್ಠ ಎರಡು ಹೆಕ್ಟೇರ್ ಗೆ ಸೀಮಿತವಾಗಿರುವಂತೆ ಪ್ರೋತ್ಸಾಹ ಧನವನ್ನು ನೇರನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮೆಮಾಡಲಾಗುತ್ತದೆ.
ಆರ್ಥಿಕ ನೆರವಿಗೆ e-KYC ಅವಧಿ ವಿಸ್ತರಣೆ
ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡಲು ರೈತಸಿರಿ ಯೋಜನೆಯನ್ನು ಕರ್ನಾಟಕ ಸರ್ಕಾರ ಅನುಷ್ಠಾನಗೊಳಿಸಿದ್ದು, ಸಮೀಪದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಹಾಗೂ ರೇಷ್ಮೆ ಇಲಾಖೆಯಲ್ಲಿ ಪೊರ್ಟಲ್ ಗೆ ಪಹಣಿ ಸೇರಿಸಿ ನೋಂದಾಯಿಸಿಕೊಳ್ಳಲು ಮತ್ತು ಬೆಳೆ ಸಮೀಕ್ಷೆಯ ರೈತರ ಆ್ಯಪ್ ಮೂಲಕ ತಮ್ಮ ಜಮೀನಿನಲ್ಲಿ ಬೆಳೆದ ಸಿರಿಧಾನ್ಯ ಬೆಳೆಗಳನ್ನು ನಮೂದಿಸಿ, ಯೋಜನೆಯ ಉಪಯೋಗ ಪಡೆಯಬಹುದು.
+ There are no comments
Add yours