ಸಚಿವ ಬಿ.ಸಿ ನಾಗೇಶ್ ರಾಜೀನಾಮೆಗೆ ಆಗ್ರಹ

1 min read

Tumkurnews
ತುಮಕೂರು; ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನಿವಾಸದ ಎದುರು ಪ್ರತಿಭಟನೆ ನಡೆಸಿದ ಎನ್.ಎಸ್.ಯು.ಐ ಕಾರ್ಯಕರ್ತರ ಬಂಧನಕ್ಕೆ ಕಾಂಗ್ರೆಸ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಬಿ.ಸಿ ನಾಗೇಶ್ ರಾಜೀನಾಮೆಗೆ ಆಗ್ರಹಿಸಿದೆ.

ಶಿಕ್ಷಣ ಸಚಿವ ನಾಗೇಶ್ ಮನೆಗೆ ಬೆಂಕಿ ಹಚ್ಚುವ ಯತ್ನ; 15 ಮಂದಿ ಪೊಲೀಸ್ ವಶಕ್ಕೆ
ಈ ಕುರಿತು ತಿಪಟೂರು ಕಾಂಗ್ರೆಸ್ ಮುಖಂಡ ಲೋಕೇಶ್ವರ್ ಮಾತನಾಡಿದ್ದು, ಬಿ.ಸಿ‌ ನಾಗೇಶ್ ವಿರುದ್ಧ ಹರಿಹಾಯ್ದಿದ್ದಾರೆ. ನಾಗೇಶ್ ಅವರ ತಿಳುವಳಿಕೆ ಇಲ್ಲದ ಅವಿವೇಕತನದ ವರ್ತನೆಯಿಂದ ರಾಜೀನಾಮೆ ನೀಡಬೇಕು.
ಶಿಕ್ಷಣ ಸಚಿವರ ವರ್ತನೆಯಿಂದ ವಿದ್ಯಾರ್ಥಿಗಳು ತೊಂದರೆಗೆ ಒಳಪಟ್ಟಿದ್ದಾರೆ. ಕುವೆಂಪು, ಬಸವಣ್ಣ, ನಾರಾಯಣಗುರು, ಅಂಬೇಡ್ಕರ್, ಭಗತ್‌ಸಿಂಗ್ ಅವರ ಮೂಲ ಇತಿಹಾಸವನ್ನೇ ತಿರುಚಲು ಹೊರಟಿದ್ದಾರೆ.

ತುಮಕೂರು ಜೈಲಿಗೆ ಡಿ.ಕೆ ಶಿವಕುಮಾರ್ ಭೇಟಿ; ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ
ಹತ್ತು ಮಂದಿ ಕಮಿಟಿಯಲ್ಲಿ 9 ಮಂದಿ ಬ್ರಾಹ್ಮಣರೇ ಕೂತು ಮನು ತತ್ವಗಳನ್ನು ತುರುಕಬೇಕೆಂದು ಹೊರಟಿದ್ದಾರೆ‌. ರಾಜ್ಯದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ.
ಪ್ರತಿಭಟನೆಗೆ ಬಂದ ವಿದ್ಯಾರ್ಥಿಗಳ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ರಾಜ್ಯದಲ್ಲಿ ಶಾಂತಿ ಕದಡುವ ಕಾರ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ಇಂತಹ ಮಂತ್ರಿಯನ್ನು ಬೊಮ್ಮಾಯಿ ಅವರು ಮಂತ್ರಿ ಮಂಡಲದಲ್ಲಿ ಮುಂದುವರೆಸಿದರೆ ಇನ್ನಷ್ಟು ಅನಾಹುತ ಉಂಟಾಗಿ ಸಮಾಜದ ಸ್ವಾಥ್ಯ ಹಾಳಾಗುತ್ತದೆ. ಹಾಗಾಗಿ ಬಿ.ಸಿ ನಾಗೇಶ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಲೋಕೇಶ್ವರ್ ಆಗ್ರಹಿಸಿದರು.

ರೋಹಿತ್ ಚಕ್ರತೀರ್ಥ ವಿರುದ್ಧ ತೀವ್ರಗೊಂಡ ಆಕ್ರೋಶ; ಒಕ್ಕಲಿಗರ ಪ್ರತಿಭಟನೆ

About The Author

You May Also Like

More From Author

+ There are no comments

Add yours