ತುಮಕೂರು ಬಿಜೆಪಿ ಸುರೇಶ್ ಗೌಡ ತೆಕ್ಕೆಗೆ

1 min read

ತುಮಕೂರು, (ಜೂ.22) tumkurnews.in

  • ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರನ್ನು ನೇಮಿಸಲಾಗಿದೆ.
    ಈವರೆಗೆ ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಬಿ ಜ್ಯೋತಿಗಣೇಶ್ ಅವರು ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ಜವಬ್ದಾರಿ ನಿರ್ವಹಿಸಿದ್ದರು, ಇನ್ಮುಂದೆ ಆ ಜವಾಬ್ದಾರಿಯನ್ನು ಸುರೇಶ್ ಗೌಡ ಅವರಿಗೆ ರಾಜ್ಯ ಬಿಜೆಪಿ ವಹಿಸಿದೆ.
    ಈ ಕುರಿತು ಪ್ರತಿಕ್ರಿಯೆ ನೀಡಿರುವ ನೂತನ ಅಧ್ಯಕ್ಷ ಬಿ.ಸುರೇಶ್ ಗೌಡ, ಭಾರತೀಯ ಜನತಾ ಪಾರ್ಟಿಯು ನನಗೆ ಎಲ್ಲವನ್ನೂ ನೀಡಿದೆ. ಎರಡು ಬಾರಿ ರಾಜ್ಯ ಕಾರ್ಯದರ್ಶಿಯಾಗಿ, ಎರಡು ಬಾರಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ, ಒಂದು ಬಾರಿ ಜಿಲ್ಲಾಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ. ಒಮ್ಮೆ ಮೈಸೂರು ಪೇಪರ್ ಮಿಲ್ಸ್ ನ ನಿಗಮ ಮಂಡಳಿ ಅಧ್ಯಕ್ಷನಾಗಿ ಕೂಡ ನನಗೆ ಪಕ್ಷ ಅವಕಾಶ ಮಾಡಿಕೊಟ್ಟಿತ್ತು.
    ಈಗ ಪುನಃ ನನಗೆ ಜಿಲ್ಲಾ ಅಧ್ಯಕ್ಷರ ಜವಾಬ್ದಾರಿ ನೀಡಿದೆ. ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ, ಮುಖ್ಯಮಂತ್ರಿಗಳಿಗೆ, ರಾಜ್ಯಾಧ್ಯಕ್ಷರಿಗೆ ತುಂಬು ಹೃದಯದ ಅಭಿನಂದನೆಗಳು ಹಾಗೂ ಎಲ್ಲರಿಗೂ ಆಭಾರಿಯಾಗಿದ್ದೇನೆ. ಸಂಘಟನೆ ಹೇಳುವ ಕೆಲಸಕಾರ್ಯಗಳಲ್ಲಿ ಅತ್ಯಂತ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ನಿರ್ವಹಿಸುತ್ತೇನೆ’ ಎಂದು ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours