ಕೊರಟಗೆರೆ; ಬೈಕ್ ಡಿಕ್ಕಿ, ಬಸ್ಸಿಗಾಗಿ ಕಾಯುತ್ತಿದ್ದ ವ್ಯಕ್ತಿ ಸಾವು

1 min read

Tumkurnews
ಕೊರಟಗೆರೆ; ಬಸ್ಸಿಗಾಗಿ ಕಾಯುತ್ತಿದ್ದ ವ್ಯಕ್ತಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ತಾಲ್ಲೂಕಿನ ಜಂಪೇನಹಳ್ಳಿ ಕ್ರಾಸ್ ಬಳಿ‌ ಘಟನೆ ಸಂಭವಿಸಿದ್ದು, ಕಲ್ಲುಗುಟ್ಟರಹಳ್ಳಿ ಗ್ರಾಮದ ರಾಮಕೃಷ್ಣಪ್ಪ (65) ಮೃತ ದುರ್ದೈವಿ.

ವ್ಯಾಪಕ ಮಳೆ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಜಗಮಂಗಲಿ ನದಿ
ಮೃತ ರಾಮಕೃಷ್ಣಪ್ಪ, ಕೊರಟಗೆರೆ ಪಟ್ಟಣಕ್ಕೆ ತೆರಳಲು ಜಂಪೇನಹಳ್ಳಿ ಕ್ರಾಸ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ತೋವಿನಕೆರೆ ಕಡೆಯಿಂದ ಅತಿ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರನೋರ್ವ ನಿಯಂತ್ರಣ ಕಳೆದುಕೊಂಡು ವಿಶ್ರಾಂತಿ ಗೃಹದ ಬಳಿ ನಿಂತಿದ್ದ ರಾಮಕೃಷ್ಣಪ್ಪನಿಗೆ ಗುದ್ದಿದ್ದಾನೆ.
ದ್ವಿಚಕ್ರ ವಾಹನ ಸವಾರ ಗುದ್ದಿದ ರಭಸಕ್ಕೆ ರಾಮಕೃಷ್ಣಪ್ಪನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಕೂಡಲೇ ಅವರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯದಲ್ಲಿ ರಾಮಕೃಷ್ಣಪ್ಪ ಕೊನೆಯುಸಿರೆಳೆದರು.

ಬಿಜೆಪಿ ಫ್ಲೆಕ್ಸ್ ಗಳಲ್ಲಿ ತಲೆಕೆಳಗಾದ ರಾಷ್ಟ್ರ ಧ್ವಜ; ಸಾರ್ವಜನಿಕರಿಂದ ಟೀಕೆ
ಹಿಟ್ ಅಂಡ್ ರನ್; ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಮೃತ ರಾಮಕೃಷ್ಣಪ್ಪನ ಜೊತೆಯಲ್ಲಿದ್ದ ಸಂಬಂಧಿ ವಿಜಯ್ ಕುಮಾರ್ ದೂರು ನೀಡಿದ್ದು, ಬೈಕ್ ಸವಾರನ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಬದಲಾವಣೆ ವಿಚಾರ; ಸುರೇಶ್ ಗೌಡ ಸ್ಪೋಟಕ ಹೇಳಿಕೆ

About The Author

You May Also Like

More From Author

+ There are no comments

Add yours