ಸರಗಳ್ಳರನ್ನು ಚೇಸ್ ಮಾಡಿ ಹಿಡಿದ ಗ್ರಾಮಸ್ಥರು; ವಿಡಿಯೋ

1 min read

Tumkurnews
ತುಮಕೂರು; ಮಹಿಳೆಯೋರ್ವರ ಮಾಂಗಲ್ಯ ಸರ ಎಗರಿಸಿ ಪರಾರಿಯಾಗುತ್ತಿದ್ದ ಕಳ್ಳರನ್ನು ಗ್ರಾಮಸ್ಥರು ಸಿನಿಮಿಯ ಮಾದರಿಯಲ್ಲಿ ಹಿಂಬಾಲಿಸಿ ಹಿಡಿದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸೆರೆಸಿಕ್ಕ ಕಳ್ಳರನ್ನು ಕಟ್ಟಿ ಹಾಕಿ ಪೊಲೀಸರ ಕೈಗೊಪ್ಪಿಸುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ. ತುರುವೇಕೆರೆ ತಾಲ್ಲೂಕಿನ ಹಾಲಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಕಳ್ಳರಿಬ್ಬರು ಸದ್ಯ ಪೊಲೀಸರ ವಶದಲ್ಲಿದ್ದಾರೆ.

ಪ್ರಕರಣದ ವಿವರ; ತೋಟಕ್ಕೆ ತೆರಳಿದ್ದ ಇಲ್ಲಿನ ಸುಜಾತ ಎಂಬ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ಸರಗಳ್ಳರು, ಮಹಿಳೆಯ ಕಣ್ಣಿಗೆ ಕಾರದಪುಡಿ ಎರಚಿ, ಆಕೆಯ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಸಿದಿದ್ದರು. ಬಳಿಕ ತಾವು ಬಂದಿದ್ದ ಪಲ್ಸರ್ ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದರು.

(ಕಳ್ಳರನ್ನು ಹಿಡಿದು ಕಟ್ಟಿ ಹಾಕಿರುವ ದೃಶ್ಯ)

ಮುಖ್ಯಮಂತ್ರಿ ಬದಲಾವಣೆ ವಿಚಾರ; ಸುರೇಶ್ ಗೌಡ ಸ್ಪೋಟಕ ಹೇಳಿಕೆ

ಈ ವೇಳೆ ಸಿನಿಮಿಯ ಮಾದರಿಯಲ್ಲಿ ಕಳ್ಳರನ್ನು ಬೆನ್ನಟ್ಟಿದ ಗ್ರಾಮಸ್ಥರು, ಅವರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಕಳ್ಳರು ತಪ್ಪಿಸಿಕೊಳ್ಳದಂತೆ ಹಗ್ಗದಿಂದ ಅವರ ಕೈಗಳನ್ನು ಕಟ್ಟಿ ಮಳೆಯಲ್ಲೇ‌‌ ನಿಲ್ಲಿಸಿದ್ದರು. ನಂತರ ದಂಡಿನ ಶಿವರ ಪೊಲೀಸರ ವಶಕ್ಕೆ ಆರೋಪಿಗಳಿಬ್ಬರನ್ನು ನೀಡಲಾಗಿದೆ.

About The Author

You May Also Like

More From Author

+ There are no comments

Add yours