ಸರ್ಕಾರದಲ್ಲಿ ರೆವಿನ್ಯೂ ಕಡಿಮೆ ಇದೆ; ಸಕಾಲದಲ್ಲಿ ತೆರಿಗೆ ಪಾವತಿಸಿ

1 min read

ತುಮಕೂರು ನ್ಯೂಸ್. ಇನ್
Tumkurnews.in(ಜು.17)

ಕೋವಿಡ್ 19 ಪರಿಣಾಮವಾಗಿ ಸರ್ಕಾರದಲ್ಲಿ ರೆವಿನ್ಯೂ ಕಡಿಮೆಯಿದ್ದು, ಸಾರ್ವಜನಿಕರು ಸರಿಯಾದ ಸಮಯದಲ್ಲಿ ನಿಗದಿತ ಕಂದಾಯವನ್ನು ಪಾವತಿಸಿಬೇಕು ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ಮನವಿ ಮಾಡಿದರು.
ನಗರದಲ್ಲಿ ಶುಕ್ರವಾರ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಾನಗರಪಾಲಿಕೆಯ ವಾರ್ಡ್ ನಂ.31ರ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ವಿವೇಚನಾ ಅನುದಾನದಲ್ಲಿ ಜಯನಗರ ಪಶ್ಚಿಮದ 1ನೇ ಮುಖ್ಯರಸ್ತೆಯ ಪ್ಯಾರಲಲ್ ರಸ್ತೆ, 2ನೇ ಮುಖ್ಯರಸ್ತೆ ಮತ್ತು 3ನೇ ಮುಖ್ಯರಸ್ತೆ, ಕಟ್ಟ ಶ್ರೀನಿವಾಸ್ ಮನೆ ರಸ್ತೆ ಹಾಗೂ ಜಯನಗರ ಪೂರ್ವದ 40 ಅಡಿ ರಸ್ತೆಯಿಂದ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಗೆ ಸಿಸಿ ಚರಂಡಿ ಮತ್ತು ರಸ್ತೆ ಅಭಿವೃದ್ಧಿ, ಜಯನಗರ ಮುಖ್ಯರಸ್ತೆಯಲ್ಲಿ ನರಸೇಗೌಡರ ಮನೆ ರಸ್ತೆಯಲ್ಲಿ ಸಿಸಿ ಚರಂಡಿ ನಿರ್ಮಾಣದ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು‌ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.

ಸುಮಾರು ರೂ.80 ಲಕ್ಷಗಳ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಪ್ರಸ್ತುತ ರೂ.25 ಕೋಟಿ ಅನುದಾನದಲ್ಲಿ ಮುಖ್ಯ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇಲ್ಲಿನ ಪ್ಯಾರಲಲ್ ರಸ್ತೆಗೆ ತಲಾ 5 ಕೋಟಿ ಮೀಸಲಿಟ್ಟಿದ್ದು, ಶೆಟ್ಟಿಹಳ್ಳಿಯಿಂದ ಪಾಲಸಂದ್ರ ರಸ್ತೆಗೆ ಸುಮಾರು 2 ಕೋಟಿಯನ್ನು ನೀಡಲಾಗಿದೆ ಎಂದರು.
ಸರ್ಕಾರಿ ಜಾಗ ಹಾಗೂ ಸುಮಾರು 1100 ಮೀಟರ್ ರಸ್ತೆಗೆ ಸುಮಾರು 1 ಕೋಟಿಯನ್ನು ಹಾಗೂ 1.5 ಕಿಮೀ ಚರಂಡಿಯನ್ನು ಮಾಡಲಾಗುತ್ತಿದೆ. ಪ್ರಸ್ತುತ ಕೋವಿಡ್ 19ರ ಪ್ರಯುಕ್ತ ಸರ್ಕಾರದಲ್ಲಿ ರೆವಿನ್ಯೂ ಕಡಿಮೆಯಿದ್ದು, ಸಾರ್ವಜನಿಕರು ಸರಿಯಾದ ಸಮಯದಲ್ಲಿ ನಿಗದಿತ ಕಂದಾಯವನ್ನು ಪಾವತಿಸಿಬೇಕು ಎಂದು ಈ ಸಮಯದಲ್ಲಿ ತಿಳಿಸಿದರು.
ಈ ಸಂಧರ್ಭದಲ್ಲಿ ಪಾಲಿಕೆ ಮೇಯರ್ ಫರೀದಾ ಬೇಗಂ, ಉಪ ಮೇಯರ್ ಶಶಿಕಲಾ ಗಂಗಹನುಮಯ್ಯ, ಆಯುಕ್ತೆ ರೇಣುಕಾ, ಸದಸ್ಯರಾದ ಸಿ.ಎನ್.ರಮೇಶ್, ಬಿ.ಜಿ.ಕೃಷ್ಣಪ್ಪ, ವಿಷ್ಣುವರ್ಧನ್, ಮಂಜುಳ ಆದರ್ಶ್, ಜಯನಗರ ಪಶ್ಚಿಮ ಬಡಾವಣೆಯ ನಾಗರೀಕ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ವೀರಪ್ಪ ದೇವರು, ಅಧ್ಯಕ್ಷ ದಾಸಪ್ಪ, ಶ್ರೀನಿವಾಸ್‍ ಮೂರ್ತಿ, ಕೆ.ವಿ.ಪ್ರಕಾಶ್, ಷಡಾಕ್ಷರಿ ಹಾಗೂ ಇತರೆ ಮುಖಂಡರು ಹಾಜರಿದ್ದರು.

About The Author

You May Also Like

More From Author

+ There are no comments

Add yours