ಫಸಲ್ ಬಿಮಾ ಮಾಹಿತಿ, ಎಲ್ಲಾ ರೈತರಿಗೆ ತಲುಪಿಸಿ

1 min read

ತುಮಕೂರು(ಜು.1) tumkurnews.in

ಜಿಲ್ಲೆಯಲ್ಲಿ 2020-21ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ- ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ)ಯೋಜನೆಯಡಿ ಅಧಿಸೂಚಿಸಲಾದ ಬೆಳೆಗಳು, ಇಂಡೆಮ್ನಿಟಿ ಮಟ್ಟ ವಿಮಾ ಮೊತ್ತ, ರೈತರು ಪಾವತಿಸಬೇಕಾದ ವಿಮಾ ಕಂತು ಹಾಗೂ ವಿಮಾ ಪ್ರಸ್ತಾವನೆ ಸಲ್ಲಿಸುವಂತೆ ತೋಟಗಾರಿಕೆ ಉಪನಿರ್ದೇಶಕ ಬಿ. ರಘು ತಿಳಿಸಿದ್ದಾರೆ.
ತಾಲೂಕು, ಹೋಬಳಿ ಮತ್ತು ಬೆಳೆಗಳ ವಿವರ ಇಂತಿದೆ. ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿಯಲ್ಲಿ ಟೊಮ್ಯಾಟೊ, ಚಿಕ್ಕನಾಯಕನಹಳ್ಳಿ-ಹಂದನಕೆರೆ
(ಕೆಂಪು ಮೆಣಸಿನಕಾಯಿ- (ಮ.ಅ), ಹುಳಿಯಾರು ಹೋಬಳಿಯಲ್ಲಿ ಈರುಳ್ಳಿ-(ನೀ)-ಕೆಂಪು ಮೆಣಸಿನಕಾಯಿ-(ಮ.ಅ) ಹಾಗೂ ಟೊಮ್ಯಾಟೊ, ತಿಪಟೂರು-ನೊಣವಿನಕೆರೆ (ಕೆಂಪು ಮೆಣಸಿನಕಾಯಿ-(ನೀ), ತುಮಕೂರು-ಹೆಬ್ಬೂರು(ಟೊಮ್ಯಾಟೊ), ತುರುವೇಕೆರೆ-ದಬ್ಬೇಘಟ್ಟ(ಟೊಮ್ಯಾಟೊ), ಪಾವಗಡ-ಕಸಬಾ(ಕೆಂಪು ಮೆಣಸಿನಕಾಯಿ-(ನೀ), ಮಧುಗಿರಿ-ಐ.ಡಿ ಹಳ್ಳಿ(ಕೆಂಪು ಮೆಣಸಿನಕಾಯಿ-(ನೀ), ಕೊಡಿಗೇನಹಳ್ಳಿ ಹೋಬಳಿಯಲ್ಲಿ(ಕೆಂಪು ಮೆಣಸಿನಕಾಯಿ-(ನೀ) ಹಾಗೂ ಪುರವರ ಹೋಬಳಿ-(ಕೆಂಪು ಮೆಣಸಿನಕಾಯಿ-(ನೀ), ಸಿರಾ-ಗೌಡಗೆರೆ(ಈರುಳ್ಳಿ-ನೀ)ಬುಕ್ಕಾಪಟ್ಟಣ-ಈರುಳ್ಳಿ(ನೀ) ಹಾಗೂ(ಈರುಳ್ಳಿ-(ಮ.ಆ), ಹುಲಿಕುಂಟೆ ಹೋಬಳಿಯ ಈರುಳ್ಳಿ(ನೀ).
ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ-ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಅಧಿಸೂಚಿಸಲಾದ ಬೆಳೆಗಳು, ಇಂಡೆಮ್ನಿಟಿ ಮಟ್ಟ ವಿಮಾ ಮೊತ್ತ ರೈತರು ಪಾವತಿಸಬೇಕಾದ ವಿಮಾ ಕಂತು ಹಾಗೂ ವಿಮಾ ಪ್ರಸ್ತಾವನೆ ಸಲ್ಲಿಸಲು ಕೊನೆಯ ದಿನಾಂಕದ ವಿವರ ಇಂತಿದೆ. ಟೊಮ್ಯಾಟೋ ಬೆಳೆಗೆ ಇಂಡೆಮ್ನಿಟಿ ಮಟ್ಟ ಶೇ.90ರಷ್ಟು, ವಿಮಾ ಮೊತ್ತ 1,18,000 ರೂ., ರೈತರು ಪಾವತಿಸಬೇಕಾದ ವಿಮಾ ಕಂತು 5,900 ರೂ., ಜುಲೈ 31 ಕೊನೆಯ ದಿನವಾಗಿದೆ.

ಕೆಂಪು ಮೆಣಸಿನಕಾಯಿ (ಮ.ಆ)-ಶೇ.80ರಷ್ಟು ವಿಮಾ ಮೊತ್ತ 72000 ರೂ., ರೈತರು ಪಾವತಿಸಬೇಕಾದ ಮೊತ್ತ 3600 ರೂ., ಜುಲೈ 15 ಕೊನೆಯ ದಿನ. ಕೆಂಪು ಮೆಣಸಿನಕಾಯಿ (ನೀ)-ಶೇ.90ರಷ್ಟು ವಿಮಾ ಮೊತ್ತ 96000 ರೂ., ರೈತರು ಪಾವತಿಸಬೇಕಾದ ಮೊತ್ತ 4800 ರೂ., ಜುಲೈ 15 ಕೊನೆಯ ದಿನ. ಈರುಳ್ಳಿ(ನೀ)-ಶೇ.90ರಷ್ಟು ವಿಮಾ ಮೊತ್ತ 75000 ರೂ., ರೈತರು ಪಾವತಿಸಬೇಕಾದ ಮೊತ್ತ 3750 ರೂ., ಜುಲೈ 31 ಕೊನೆಯ ದಿನ. ಈರುಳ್ಳಿ(ಮ.ಆ)-ಶೇ.80ರಷ್ಟು ವಿಮಾ ಮೊತ್ತ 70000 ರೂ., ರೈತರು ಪಾವತಿಸಬೇಕಾದ ಮೊತ್ತ 3500 ರೂ., ಜುಲೈ 31 ಕೊನೆಯ ದಿನವಾಗಿದೆ.

ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ- ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ವಿಮಾ ಕಂತನ್ನು ಪಾವತಿಸಲು ಬೆಳೆಗೆ ಅನುಗುಣವಾಗಿ ನಿಗಧಿತ ದಿನಾಂಕದೊಳಗೆ ರೈತರು ವಿಮಾ ಕಂತನ್ನು ಪಾವತಿಸಬಹುದಾಗಿದೆ. ಮಾಹಿತಿಗಾಗಿ ಆಯಾ ತಾಲ್ಲೂಕು ಅಧಿಕಾರಿಗಳ ದೂ.ಸಂ: ತುಮಕೂರು-9945792725, ಗುಬ್ಬಿ-9686056705, ಚಿಕ್ಕನಾಯಕನಹಳ್ಳಿ-9538272964, ಕುಣಿಗಲ್-9448660766, ತಿಪಟೂರು-9964791910, ತುರುವೇಕೆರೆ-9448416334, ಕೊರಟಗೆರೆ-9535781963, ಮಧುಗಿರಿ-9448448970, ಶಿರಾ-9945735297, ಪಾವಗಡ-9844042356 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours