ವಿಕಲಚೇತನರ ಬಸ್ ಪಾಸ್‍ಗೆ ಅರ್ಜಿ ಆಹ್ವಾನ
2024ನೇ ಸಾಲಿನ ಬಸ್ ಪಾಸ್ ಅವಧಿ ವಿಸ್ತರಣೆ; ಅರ್ಜಿ ಸಲ್ಲಿಸಲು ಎರಡು ತಿಂಗಳು ಕಾಲವಕಾಶ
Tumkurnews.in
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳು ವಿಕಲ ಚೇತನರಿಗೆ ರಿಯಾಯಿತಿ ದರದಲ್ಲಿ ನೀಡುವ ಬಸ್ ಪಾಸ್‍ಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೊಸ ಬಸ್ ಪಾಸ್ ಪಡೆಯಲು ಅರ್ಹ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಆಯಾ ಜಿಲ್ಲೆಯ ನಿಗಮದ ಕಚೇರಿಗಳಲ್ಲಿ ಬಸ್ ಪಾಸ್ ಪಡೆದುಕೊಳ್ಳಬಹುದಾಗಿರುತ್ತದೆ.
ಹೊಸದಾಗಿ ಬಸ್ ಪಾಸ್ ಪಡೆಯಲು ವಿಕಲ ಚೇತನರ ಗುರುತಿನ ಚೀಟಿ(ಯು.ಡಿ.ಐ.ಡಿ ಕಾರ್ಡ್), ಆಧಾರ್ ಕಾರ್ಡ್ ಹಾಗೂ ಪಾಸ್ ಪೋರ್ಟ್ ಅಳತೆಯ ಎರಡು ಫೋಟೋಗಳೊಂದಿಗೆ ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಬಸ್ ಪಾಸ್ ಪಡೆಯಲು 660 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ.
ಹಳೇ ಪಾಸ್ ಅವಧಿ ವಿಸ್ತರಣೆ: ಈಗಾಗಲೇ ಬಸ್ ಪಾಸ್ ಹೊಂದಿರುವವರ 2024ನೇ ಸಾಲಿನ ಬಸ್ ಪಾಸ್ ಅವಧಿಯು ಡಿಸೆಂಬರ್ 31ರ 2024ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಈ ಪಾಸ್ ಅವಧಿಯನ್ನು 2025ರ ಫೆಬ್ರವರಿ 28ರ ವರೆಗೆ ವಿಸ್ತರಣೆ ಮಾಡಲಾಗಿದೆ ಹಾಗೂ ಈಗಾಗಲೇ ಬಸ್ ಪಾಸ್ ಹೊಂದಿರುವವರು ತಮ್ಮ ಪಾಸ್ ಅನ್ನು ನವೀಕರಿಸಿಕೊಳ್ಳಲು 2025ರ ಫೆಬ್ರವರಿ 28ರ ವರೆಗೆ ಕಾಲವಕಾಶ ನೀಡಲಾಗಿರುತ್ತದೆ.
ಅರ್ಜಿ ಸಲ್ಲಿಕೆ ಕಡ್ಡಾಯ: ವಿಕಲ ಚೇತನರ ಬಸ್ ಪಾಸ್ ನವೀಕರಣಕ್ಕೂ ಕೂಡ ಸೇವಾಸಿಂಧು ತಂತ್ರಾಂಶದಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ನವೀಕರಣ ಅರ್ಜಿ ಸಲ್ಲಿಸಲು ವಿಕಲ ಚೇತನರ ಗುರುತಿನ ಚೀಟಿ(ಯು.ಡಿ.ಐ.ಡಿ ಕಾರ್ಡ್), ಆಧಾರ್ ಕಾರ್ಡ್ ಹಾಗೂ ಪಾಸ್ ಪೋರ್ಟ್ ಅಳತೆಯ ಎರಡು ಫೋಟೋಗಳೊಂದಿಗೆ ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಬಸ್ ಪಾಸ್ ಪಡೆಯಲು 660 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9591467959 ಸಂಪರ್ಕಿಸಬಹುದು.
+ There are no comments
Add yours