ಆರ್ಥಿಕ ನೆರವಿಗಾಗಿ ನೇಕಾರರಿಂದ ಅರ್ಜಿ ಆಹ್ವಾನ

1 min read

 

ಆರ್ಥಿಕ ನೆರವಿಗಾಗಿ ನೇಕಾರರಿಂದ ಅರ್ಜಿ ಆಹ್ವಾನ

Tumkurnews
ತುಮಕೂರು: ಕೈಮಗ್ಗ ಮತ್ತು ಜವಳಿ ಇಲಾಖೆಯು ವಾರ್ಷಿಕ 5,000 ರೂ.ಗಳ ಆರ್ಥಿಕ ನೆರವು ನೀಡಲು ಅರ್ಹ ಕೈಮಗ್ಗ ಮತ್ತು ವಿದ್ಯುತ್ ಮಗ್ಗದ ನೇಕಾರರಿಂದ ಅರ್ಜಿ ಆಹ್ವಾನಿಸಿದೆ.
ನೇಕಾರರ ಸಮ್ಮಾನ್ ಯೋಜನೆಯಡಿ ಈ ಹಿಂದೆ ನೋಂದಣಿಯಾಗಿರುವ ಕೈಮಗ್ಗ ನೇಕಾರರು, ಮಗ್ಗ ಪೂರ್ವ ನೇಕಾರರು, ಮಗ್ಗ ಪೂರ್ವ ಚಟುವಟಿಕೆ ಮಾಡುತ್ತಿರುವ ವಿದ್ಯುತ್ ಮಗ್ಗ ಹಾಗೂ ಕೈಮಗ್ಗ ನೇಕಾರರು, ಕಾರ್ಮಿಕರು ಆರ್ಥಿಕ ನೆರವನ್ನು ಪಡೆಯಬಹುದು.
ಆಸಕ್ತರು ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅಕ್ಟೋಬರ್ 30ರೊಳಗಾಗಿ ಉಪ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, 5ನೇ ಕ್ರಾಸ್, ಸಿದ್ದಗಂಗಾ ಬಡಾವಣೆ, ತುಮಕೂರು ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0816-2275370ಯನ್ನು ಸಂಪರ್ಕಿಸಬಹುದಾಗಿದೆ.
ಕೈಮಗ್ಗ ನೇಕಾರರು ತಮ್ಮ ಅರ್ಜಿಯೊಂದಿಗೆ ಆಧಾರ್ ಚೀಟಿ, ಪಡಿತರ ಚೀಟಿ, ನೇಕಾರ ಸಮ್ಮಾನ್ ಐ.ಡಿ, ಪೆಹಚಾನ್ ಕಾರ್ಡ್, ಆಧಾರ ಲಿಂಕ್ಡ್ ಹಾಗೂ ಎನ್‍ಪಿಸಿಐ ಮ್ಯಾಪಿಂಗ್ ಇರುವ ಬ್ಯಾಂಕ್ ಪಾಸ್ ಬುಕ್ ಪ್ರತಿ, ಕೈಮಗ್ಗ ನೇಕಾರಿಕೆ ವೃತ್ತಿಯಲ್ಲಿರುವ ಫೋಟೋ, ಕೈಮಗ್ಗದಲ್ಲಿ ಕಾರ್ಯನಿರ್ವಹಿಸುವ ಕೂಲಿ ನೇಕಾರರ ಮಜೂರಿ ಪಾವತಿಸಿದ ರಶೀದಿಯನ್ನು ಲಗತ್ತಿಸಬೇಕು.
ವಿದ್ಯುತ್ ಮಗ್ಗ ನೇಕಾರರು ತಮ್ಮ ಅರ್ಜಿಯೊಂದಿಗೆ ಘಟಕದ ಮಾಲೀಕರು, ನೇಕಾರರು, ಕಾರ್ಮಿಕರ ಆಧಾರ ಲಿಂಕ್ಡ್ ಹಾಗೂ ಎನ್.ಪಿ.ಸಿ.ಐ ಮ್ಯಾಪಿಂಗ್ ಇರುವ ಬ್ಯಾಂಕ್ ಪಾಸ್ ಬುಕ್ ಪ್ರತಿ, ವಿದ್ಯುತ್ ಮಗ್ಗ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಫಲಾನುಭವಿ ಫೋಟೋ, ವಿದ್ಯುತ್ ಸಂಪರ್ಕ ಹೊಂದಿರುವ ಆರ್.ಆರ್.ನಂ ವಿದ್ಯುತ್ ಬಿಲ್, ಘಟಕದ ಉದ್ಯೋಗ ಆಧಾರ, ಪಿ.ಎಂ.ಟಿ, ಉದ್ದಿಮೆದಾರರ ಪರವಾನಿಗೆ ಪತ್ರದ ಪ್ರತಿ, ಘಟಕದಲ್ಲಿ ಕಾರ್ಯನಿರ್ವಹಿಸುವ ನೇಕಾರರು, ಕಾರ್ಮಿಕರ ವಿವರಗಳನ್ನೊಳಗೊಂಡ ಮಜೂರಿ ಪಾವತಿಯ ಪ್ರತಿ, ಮಾಲೀಕರಿಂದ ನೇಕಾರರು, ಕಾರ್ಮಿಕರ ಬಗ್ಗೆ ದೃಢೀಕರಣ ಪತ್ರ, ಮುಚ್ಚಳಿಕೆ ಪತ್ರ, ಮತ್ತಿತರ ದಾಖಲೆಗಳನ್ನು ಲಗತ್ತಿಸಿರಬೇಕೆಂದು ಪ್ರಕಟಣೆ ತಿಳಿಸಿದೆ.

About The Author

You May Also Like

More From Author

+ There are no comments

Add yours