ಪ್ರೋತ್ಸಾಹ ಧನ: ಪ.ಜಾತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
Tumkurnews
ತುಮಕೂರು: ಸಮಾಜ ಕಲ್ಯಾಣ ಇಲಾಖೆಯು ಎಸ್.ಎಸ್.ಎಲ್.ಸಿ ಮತ್ತು ಮೆಟ್ರಿಕ್ ನಂತರದ ಕೋರ್ಸುಗಳನ್ನು ಪ್ರಥಮ ದರ್ಜೆ ಹಾಗೂ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ ಮತ್ತು ವಿದ್ಯಾಸಿರಿಗೆ ಅರ್ಜಿ ಆಹ್ವಾನ
ಆಸಕ್ತ ವಿದ್ಯಾರ್ಥಿಗಳು ಇಲಾಖಾ ಜಾಲತಾಣ sw.kar.nic.in ನಲ್ಲಿ ಪ್ರೋತ್ಸಾಹಧನದ ಅರ್ಜಿ(ಹೊಸದು) ಎಂಬ ಲಾಗಿನ್‍ನಲ್ಲಿ ವಿದ್ಯಾರ್ಥಿಗಳು ನೋಂದಣಿಯಾಗಿ ಆಧಾರ್ ನಂಬರ್ ಅನ್ನು ನಮೂದಿಸಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಯ ಬ್ಯಾಂಕ್ ಅಕೌಂಟ್‍ಗೆ ಆಧಾರ್ ಲಿಂಕ್ ಆಗಿದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಇಲಾಖಾ ಜಾಲತಾಣದಲ್ಲಿ ಸಲ್ಲಿಸಿದ ಅರ್ಜಿ ಹಾಗೂ ದಾಖಲಾತಿಯನ್ನು ಆಯಾ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು, ಜಂಟಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ತಿಳಿಸಿದ್ದಾರೆ.
ತುಮಕೂರು: ಒಂದೇ ಗ್ರಾಮದ ಮೂವರು ಮಹಿಳೆಯರ ಸಾವು! ಜಿಲ್ಲಾಧಿಕಾರಿ ಹೇಳಿದ್ದೇನು?
+ There are no comments
Add yours