ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ದಾಖಲಾತಿ ಪ್ರಾರಂಭ
Tumkurnews
ತುಮಕೂರು: ಜಿಲ್ಲೆಯ ಶಿರಾ ತಾಲೂಕು ಚಿಕ್ಕನಹಳ್ಳಿಯಲ್ಲಿರುವ ಸರ್ಕಾರಿ ಶಿಕ್ಷಕರ
ತರಬೇತಿ ಸಂಸ್ಥೆಯಲ್ಲಿ 2024-25ನೇ ಸಾಲಿನಲ್ಲಿ ದಾಖಲಾತಿ ಪ್ರಾರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.
ಸಾಮಾನ್ಯ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಕನಿಷ್ಟ 50 ಅಂಕ ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1/ ವಿಕಲಚೇತನ ವಿದ್ಯಾರ್ಥಿಗಳು ಕನಿಷ್ಟ 45 ಅಂಕ ಗಳಿಸಿರಬೇಕು.
ವಿದ್ಯಾರ್ಥಿಗಳಿಗೆ ಡಿ.ಇಎಲ್.ಇಡಿ ತರಬೇತಿ ಪಡೆದ ನಂತರ 1 ರಿಂದ 5ನೇ ತರಗತಿ ಹಾಗೂ ಪದವೀದರ ವಿದ್ಯಾರ್ಥಿಗಳಿಗೆ 6 ರಿಂದ 8ನೇ ತರಗತಿವರೆಗೆ ಬೋಧನೆ ಮಾಡಲು ಅವಕಾಶವಿರುತ್ತದೆ.
ಕೆ.ಪಿ.ಎಸ್.ಸಿ ಪರೀಕ್ಷೆ: ತುಮಕೂರಿಗೆ ಆಗಮಿಸುತ್ತಿರುವವರ ಗಮನಕ್ಕೆ!
ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶವಿದ್ದು, ಸಾಮಾನ್ಯ ವಿದ್ಯಾರ್ಥಿಗಳಿಗೆ 3500 ರೂ.ಗಳ ಪ್ರವೇಶ ಶುಲ್ಕವನ್ನು ನಿಗಧಿಪಡಿಸಲಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 25000 ರೂ.ಗಳ ವಿದ್ಯಾರ್ಥಿವೇತನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ. 9741069414, 9741507942, 9980870260, 7760783653, 9880331083, 9480250487, 9900862992ನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಪ್ರಾಂಶುಪಾಲ ತಿಮ್ಮರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
+ There are no comments
Add yours