ತುಮಕೂರು: ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನ

1 min read

 

ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನ

Tumkurnews
ತುಮಕೂರು: ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ರೈತರು ಹಾಗೂ ಉದ್ದಿಮೆದಾರರಿಗೆ ವಿವಿಧ ಸಹಾಯಧನ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ತುಮಕೂರು: KSRTC ಹೊಸ ಬಸ್ ನಿಲ್ದಾಣದಲ್ಲಿ ಜನವೋ ಜನ! ವಿಡಿಯೋ
ಯೋಜನೆಯಡಿ ಅರ್ಹರಿಗೆ ವೈಯಕ್ತಿಕ ನೀರು ಸಂಗ್ರಹಣಾ ಘಟಕ, ಫಾರಂಗೇಟ್ ಘಟಕ, ಕಡಿಮೆ ವೆಚ್ಚದಲ್ಲಿ ಹಣ್ಣು ಮಾಗಿಸುವ ಘಟಕ ನಿರ್ಮಾಣಕ್ಕೆ ಸಹಾಯಧನ ಕಲ್ಪಿಸಲಾಗುವುದು. ನೀರಿನಲ್ಲಿ ಕರಗುವ ರಸಗೊಬ್ಬರ ಘಟಕ, ಲಘು ಪೋಷಕಾಂಶಗಳ ಮಿಶ್ರಣ ಘಟಕ, ಹವಾಮಾನ ಆಧಾರಿತ ಘಟಕ, ಸೋಲಾರ್ ಪಂಪ್‌ಸೆಟ್, ಬೆಳೆ, ಹಣ್ಣು, ಹೂ ಹೊದಿಕೆ ಮತ್ತು ಮೋಹಕ, ಚಿಗುಟಾದ ಬಲೆಗಳ ಸೌಲಭ್ಯಕ್ಕಾಗಿ ಆರ್ಥಿಕ ನೆರವು ನೀಡಲಾಗುವುದು.
ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಪಹಣಿ, ಆಧಾರ್ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ತಾಲ್ಲೂಕು ಹಿರಿಯ ಸಹಾಯಕ ನಿರ್ದೇಶಕ ಕಚೇರಿ ಅಥವಾ ಗ್ರಾಮ ಪಂಚಾಯತಿ ಕಚೇರಿಗಳಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ತುಮಕೂರು: ೦೮೧೬-೨೨೭೯೭೦೫, ಗುಬ್ಬಿ: ೦೮೧೩೧-೨೨೨೬೫೯, ಶಿರಾ: ೦೮೧೩೫-೨೭೬೩೧೦, ಕುಣಿಗಲ್: ೦೮೧೩೨-೨೨೧೯೮೧, ತಿಪಟೂರು: ೦೮೧೩೪-೨೫೧೪೨೪, ಚಿಕ್ಕನಾಯಕನಹಳ್ಳಿ: ೦೮೧೩೩-೨೬೭೪೫೭, ಮಧುಗಿರಿ: ೦೮೧೩೭-೨೮೨೪೧೭, ತುರುವೇಕೆರೆ: ೦೮೧೩೯-೨೮೮೩೫೦, ಕೊರಟಗೆರೆ: ೦೮೧೩೮-೨೩೨೯೨೦, ಪಾವಗಡ-೦೮೧೩೬-೨೪೪೦೬೪ನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕ ಶಾರದಮ್ಮ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours