ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಬಲಿ: ರೈತ ಆತ್ಮಹತ್ಯೆ
Tumkurnews
ತುಮಕೂರು: ಮೈಕ್ರೋ ಫೈನಾನ್ಸ್’ಗಳ ಕಿರುಕುಳ ತಾಳಲಾರದೇ ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಇತ್ತೀಚಿಗೆ ಮೂವರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ನೆನಪು ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೋರ್ವ ರೈತನ ಬಲಿಯಾಗಿದೆ.
ತುಮಕೂರು: ಸಾಲಬಾಧೆ: ಒಂದೇ ಗ್ರಾಮದ ಮೂವರು ಮಹಿಳೆಯರು ಆತ್ಮಹತ್ಯೆ
ಗುತ್ತಿಗೆ ಆಧಾರದಲ್ಲಿ ಬೇರೊಬ್ಬರಿಂದ ಜಮೀನು ಪಡೆದು ವ್ಯವಸಾಯ ಮಾಡಲು ಮೈಕ್ರೋ ಪೈನಾನ್ಸ್ ಕಂಪನಿಗಳಿಂದ ಸಾಲ ಮಾಡಿದ್ದ ರೈತನೋರ್ವ, ಕಿರುಸಾಲ ವಿತರಣಾ ಕಂಪನಿಗಳ ಕಾಟಕ್ಕೆ ಹೆದರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ನಡೆದಿದೆ.
ಪಾವಗಡ ತಾಲೂಕು ವೈ.ಎನ್ ಹೊಸಕೊಟೆ ಹೋಬಳಿ ಮೇಗಳ ಪಾಳ್ಯ ತಾಂಡದ ರೈತ ಸ್ವಾಮಿನಾಯ್ಕ (40) ನೇಣಿಗೆ ಶರಣಾದ ದುದೈರ್ವಿ. ಈತನಿಗೆ ಸ್ವಂತ ಜಮೀನು ಇಲ್ಲದಿದ್ದರೂ ಬೇರೆಯವರಿಂದ ಗುತ್ತಿಗೆ(ವಾರಕ್ಕೆ)ಗೆ ಭೂಮಿ ಪಡೆದು, ವ್ಯವಸಾಯ ಮಾಡುತ್ತಿದ್ದರು ಎನ್ನಲಾಗಿದೆ.
ಈ ಬಾರಿ ವ್ಯವಸಾಯಕ್ಕಾಗಿ ಎರಡು ಮೈಕ್ರೋ ಪೈನಾನ್ಸ್ ಕಂಪನಿಗಳಿಂದ ತಲಾ ಎರಡು ಲಕ್ಷದಂತೆ ನಾಲ್ಕು ಲಕ್ಷ ರೂಗಳ ಸಾಲ ಮಾಡಿದ್ದರು. ಮಳೆಯಿಲ್ಲದೆ, ಬೆಳೆ ಬಾರದ ಕಾರಣ ಫೈನಾನ್ಸ್ ಕಂಪನಿಗಳ ಸಾಲ ಕಟ್ಟಲು ಸಾಧ್ಯವಾಗಿರಲಿಲ್ಲ.
ರಾಜ್ಯದಲ್ಲಿ ತೀವ್ರ ಬರ: ಸಾಲ ವಸೂಲಾತಿಗೆ ತಡೆ
ಆದರೆ ಕಿರುಸಾಲ ಕಂಪನಿಯವರು ದಿನೇ ದಿನೆ ಸಾಲದ ಕಂತು ಕಟ್ಟುವಂತೆ ಒತ್ತಡ ಹೇರುತ್ತಿದ್ದರಿಂದ ಭಯಗೊಂಡು ದಾಬಸ್‍ಪೇಟೆ ಸಮೀಪದ ಬಿಲ್ಲಿನಕೋಟೆ ಗ್ರಾಮಕ್ಕೆ ಬಂದು ನೇಣಿಗೆ ಶರಣಾಗಿದ್ದಾನೆ.
ಈತನಿಗೆ ಓರ್ವ ಪತ್ನಿ ಮತ್ತು ಮಗಳು ಇದ್ದು, ಮನೆಯಲ್ಲಿ ದುಡಿಯುವ ಜೀವವನ್ನು ಕಳೆದುಕೊಂಡು ಇಡೀ ಕುಟುಂಬ ಬೀದಿ ಪಾಲಾಗಿದೆ. ಈ ಸಂಬಂಧ ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಸಾಲ ವಸೂಲಿಗೆ ಕಿರುಕುಳ ನೀಡಿದರೆ ಈ ನಂಬರ್’ಗೆ ಕಾಲ್ ಮಾಡಿ: ಎಸ್.ಪಿ
ತನಿಖೆ ಮತ್ತು ಪರಿಹಾರಕ್ಕೆ ಒತ್ತಾಯ: ಮೃತರು ಕೂಲಿ ಕಾರ್ಮಿಕರಾಗಿದ್ದು, ವಾರಕ್ಕೆಂದು ಬೇರೆಯವರ ಜಮೀನು ಪಡೆದು, ವ್ಯವಸಾಯ ಮಾಡಿ, ಅವರಿಗೂ ನೀಡಿ, ತಾವು ಜೀವನ ನಡೆಸುತ್ತಿದ್ದರು. ಇವರ ಸಾವಿನಿಂದ ಇಡೀ ಕುಟುಂಬಕ್ಕೆ ದಿಕ್ಕಿಲದಂತಾಗಿದೆ. ಜಿಲ್ಲಾಧಿಕಾರಿಗಳು ಮೈಕ್ರೋ ಫೈನಾನ್ಸ್ ನವರು ಬರಗಾಲ ಇರುವುದರಿಂದ ಸಾಲ ವಸೂಲಿ ಮಾಡಬಾರದೆಂದು ಆದೇಶ ನೀಡಿದ್ದಾರೆ. ಆದರೆ ಅದನ್ನು ಪಾಲಿಸದ ಕಿರುಸಾಲ ಕಂಪನಿಗಳು ರೈತರಿಗೆ ಮತ್ತು ಜನರಿಗೆ ಕಿರುಕುಳ ನೀಡುತಿದ್ದು, ಅವರ ಕಿರುಕುಳಕ್ಕೆ ಮತ್ತೊಂದು ಜೀವ ಬಲಿಯಾಗಿದೆ.
ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಪೈನಾನ್ಸ್ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡು ದಿಕ್ಕಿಲ್ಲದ ಸ್ಥಿತಿಯಲ್ಲಿರುವ ಸ್ವಾಮಿ ನಾಯ್ಕ್ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಅಮ್ ಆದ್ಮಿ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಲಸಂದ್ರ ಮಧುಸೂಧನ್, ನಗರ ಅಧ್ಯಕ್ಷ ಮಹಮದ್ ಗೌಸ್ ಪೀರ್, ಪಾವಗಡ ತಾಲೂಕು ಕಾರ್ಯದರ್ಶಿ ತಾವರೇನಾಯ್ಕ್ ಒತ್ತಾಯಿಸಿದ್ದಾರೆ.
ಶಿರಾಗೇಟ್ ರಸ್ತೆ ಕುಸಿಯುವ ಭೀತಿ!: ಬೈಪಾಸ್ ರಸ್ತೆ ಬಳಸುವಂತೆ ಸೂಚನೆ
+ There are no comments
Add yours