ಶಿರಾಗೇಟ್ ರಸ್ತೆ ಕುಸಿಯುವ ಭೀತಿ!: ಬೈಪಾಸ್ ರಸ್ತೆ ಬಳಸುವಂತೆ ಸೂಚನೆ

1 min read

 

ಶಿರಾಗೇಟ್ ಸಂಚಾರ ಮುಕ್ತವಾದ ಬೆನ್ನಲ್ಲೇ ರಸ್ತೆ ಕುಸಿಯುವ ಭೀತಿ: ಬೈಪಾಸ್ ರಸ್ತೆ ಬಳಸುವಂತೆ ಸೂಚನೆ

Tumkurnews
ತುಮಕೂರು: ನಗರದ ಶಿರಾಗೇಟ್ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಲಘು ವಾಹನಗಳು ಮಾತ್ರವೇ ಸದರಿ ಮಾರ್ಗದಲ್ಲಿ ಸಂಚರಿಸುವಂತೆ ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ಸೂಚನೆ ನೀಡಿದೆ.

ಶಿರಾಗೇಟ್ ರಸ್ತೆ ಸಂಚಾರ ಮುಕ್ತ
ಈ ಕುರಿತು ಜಿಲ್ಲಾ ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ‘ನಗರದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ತುಮಕೂರು ಅಮಾನಿಕೆರೆ ಕೋಡಿಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಎಸ್. ಮಾಲ್ ಮುಂಭಾಗದ ರಸ್ತೆಯಲ್ಲಿ ದ್ವಿ ಚಕ್ರ ವಾಹನ, ಆಟೋಗಳ ಸಂಚಾರಕ್ಕೆ, ತುರ್ತು ಸೇವಾ ವಾಹನಗಳು ಹಾಗೂ ಕಡಿಮೆ ಎತ್ತರವಿರುವ ಶಾಲಾ ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಟ್ಟಿರುತ್ತದೆ. ಮಳೆಗಾಲವಾದ್ದರಿಂದ ನಿಗದಿತ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳು ಸದರಿ ರಸ್ತೆಯಲ್ಲಿ ಸಂಚರಿಸಿದಲ್ಲಿ ರಸ್ತೆಯು ಕುಸಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ನಿಗದಿತ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳು ತುಮಕೂರು ನಗರದ ಹನುಮಂತಪುರ ಬ್ರಿಡ್ಜ್ ಮುಖಾಂತರ ಬೈಪಾಸ್ ರಸ್ತೆಯಲ್ಲಿ ಸಂಚರಿಸಲು ಕೋರಲಾಗಿದೆ’ ಎಂದು‌ ಜಿಲ್ಲಾ ಪೊಲೀಸ್ ‌ಇಲಾಖೆಯು ಪ್ರಕಟಣೆಯಲ್ಲಿ ಕೋರಿದೆ.

ತುಮಕೂರು: ಶಿರಾ ಗೇಟ್ ರಸ್ತೆ ಬಂದ್: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ

About The Author

You May Also Like

More From Author

+ There are no comments

Add yours