ಮಧುಗಿರಿ: ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ ಪ್ರಕರಣ: ಮತ್ತೋರ್ವ ಸಾವು

1 min read

ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ ಪ್ರಕರಣ: ಮತ್ತೋರ್ವ ಸಾವು

Tumkurnews
ಮಧುಗಿರಿ: ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಓರ್ವ ಮಹಿಳೆ ಸಾವನ್ನಪ್ಪಿದ್ದ ಪ್ರಕರಣದಲ್ಲಿ ಮತ್ತೋರ್ವ ಮೃತಪಟ್ಟಿದ್ದಾನೆ.
ಉಪ್ಪಾರಹಳ್ಳಿ ಗ್ರಾಮದ ಹನುಮಂತ ರೆಡ್ಡಿ (65) ಮೃತ ದುರ್ದೈವಿ. ಮಧುಗಿರಿ ತಾಲ್ಲೂಕು ಪುರವರ ಗ್ರಾಮದ ಹೊರವಲಯದ ಜಯಮಂಗಲಿ ನದಿ ಸೇತುವೆ ಬಳಿ ಶುಕ್ರವಾರ ಘಟನೆ ಸಂಭವಿಸಿತ್ತು.

ಮಧುಗಿರಿ: ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ: ಓರ್ವ ಮಹಿಳೆ ಸಾವು
ಪುರವರ ಹೋಬಳಿಯ ಕೃಷ್ಣಯ್ಯಪಾಳ್ಯದಿಂದ ಜೋಗೇನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ತಾಯಿ ಮತ್ತು ಮಗ ಹಾಗೂ ಕೊಡಿಗೇನಹಳ್ಳಿಯಿಂದ ಮಧುಗಿರಿಗೆ ತೆರಳುತಿದ್ದ ಇಬ್ಬರು ಸ್ನೇಹಿತರಿದ್ದ ದ್ವಿಚಕ್ರವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು.
ಅಪಘಾತದ ರಭಸಕ್ಕೆ ಜೋಗೇನಹಳ್ಳಿ ಗ್ರಾಮದ ಹನುಮಕ್ಕ (45) ಸ್ಥಳದಲ್ಲೇ ಮೃತಪಟ್ಟಿದ್ದು, ಈಕೆಯ 25 ಪುತ್ರನಿಗೆ ಗಂಭೀರ ಗಾಯಗಳಾಗಿತ್ತು.

ತುಮಕೂರು: ಸಚಿವರಾದ ಡಾ.ಜಿ ಪರಮೇಶ್ವರ್, ಕೆ.ಎನ್ ರಾಜಣ್ಣ ರಾಜೀನಾಮೆ ನೀಡಲಿ
ಮತ್ತೊಂದು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತಿದ್ದ ಉಪ್ಪಾರಹಳ್ಳಿ ಗ್ರಾಮದ ಹನುಮಂತ ರೆಡ್ಡಿ (65) ಹಾಗೂ ಗಂಗಾಧರಪ್ಪ (67) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು.
ಈ ಪೈಕಿ ಹನುಮಂತ ರೆಡ್ಡಿ ಚಿಕಿತ್ಸೆ ಫಲಿಸದೇ ತುಮಕೂರಿನ ಸಿದ್ಧಾರ್ಥ ಆಸ್ಪತ್ರೆಯಲ್ಲಿ ಶುಕ್ರವಾರ ಮಧ್ಯರಾತ್ರಿ ‌ಕೊನೆಯುಸಿರೆಳೆದಿದ್ದಾರೆ.

ತುಮಕೂರು: ಈ ಶಾಲೆಗಳು ಅನಧಿಕೃತ: ಮಕ್ಕಳನ್ನು ಸೇರಿಸುವ ಮುನ್ನ ಇರಲಿ ಎಚ್ಚರ

 

About The Author

You May Also Like

More From Author

+ There are no comments

Add yours