ಸೊಗಡು ಶಿವಣ್ಣಗೆ ವಿಧಾನ ಪರಿಷತ್ ಸ್ಥಾನ?: ಮಹತ್ವದ ಬೆಳವಣಿಗೆ!
ಸೊಗಡು ಶಿವಣ್ಣಗೆ ಪರಿಷತ್ ಸ್ಥಾನ ನೀಡಲು ಒತ್ತಾಯ |
ಬಿಜೆಪಿ ವರಿಷ್ಠರಿಗೆ ವಿವಿಧ ಸಮಾಜಗಳ ವಿನಂತಿ
Tumkurnews
ತುಮಕೂರು: ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ವಿಧಾನ ಪರಿಷತ್ ಸದಸ್ಯತ್ವ ನೀಡಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ. ಜಿಲ್ಲೆಗೆ ಹಾಗೂ ಪಕ್ಷಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಸೊಗಡು ಶಿವಣ್ಣಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕು ಎನ್ನುವುದು ಅವರ ಬೆಂಬಲಿಗರ ಆಗ್ರಹವಾಗಿದೆ.
ತುಮಕೂರು: 25 ಸಾವಿರ ಬಂಡವಾಳ: ತಿಂಗಳಿಗೆ 3 ಲಕ್ಷ ಆದಾಯ!
ಬಿಜೆಪಿ ಪಕ್ಷದ ವಿವಿಧ ಮುಖಂಡರು, ಹಲವು ಸಮಾಜದ ಪ್ರಮುಖರು ಈ ಕುರಿತು ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದು, ಮಹತ್ವದ ಬೆಳವಣಿಗೆ ಆಗಿದೆ.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ರಾಜ್ಯದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಾರದಿದ್ದ ಕಾಲದಿಂದಲ್ಲೂ ತುಮಕೂರಿನಲ್ಲಿ ಬಿಜೆಪಿಯಿಂದ ಶಾಸಕರಾಗಿ ನಾಲ್ಕು ಬಾರಿ ವಿಧಾನ ಸಭೆಗೆ ಆಯ್ಕೆಯಾಗಿದ್ದ ಸೊಗಡು ಶಿವಣ್ಣನವರು, ಎರಡು ಬಾರಿ ಸಚಿವರಾಗಿದ್ದರು. ಜನಪರ ಹೋರಾಟಗಳ ಮೂಲಕ ಜನಾನುರಾಗಿ ನಾಯಕರಾಗಿ ಎಲ್ಲಾ ವರ್ಗದ ಜನರ ವಿಶ್ವಾಸದೊಂದಿಗೆ ಇಂದಿಗೂ ಜನಪರ ಕೆಲಸ ಮಾಡುತ್ತಿದ್ದಾರೆ. ಇವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂದು ಕೋರಿದರು.
ತುಮಕೂರು: ಈ ಶಾಲೆಗಳು ಅನಧಿಕೃತ: ಮಕ್ಕಳನ್ನು ಸೇರಿಸುವ ಮುನ್ನ ಇರಲಿ ಎಚ್ಚರ
ವೀರಶೈವ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ವೀರಶೈವ ಸಮಾಜದ ಮುಖಂಡ ಹೆಬ್ಬಾಕ ಮಲ್ಲಿಕಾರ್ಜುನ್, ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಸ್ನೇಹಸಂಗಮ ಸಹಕಾರ ಸಂಘದ ಅಧ್ಯಕ್ಷ ಬಾವಿಕಟ್ಟೆ ಮಂಜುನಾಥ್, ಮುಖಂಡರಾದ ನಂಜುಂಡಪ್ಪ, ಪುರವರ ಮೂರ್ತಿ, ಡೆಲ್ಟಾ ರವಿ, ಪ್ರಭಾಕರ್, ಯಶಸ್, ಏಕಾಂತ್, ಮಹದೇವಯ್ಯ, ರವಿಕುಮಾರ್, ಮಂಜುನಾಥ್ ಮೊದಲಾದವರು ಹಾಜರಿದ್ದರು.
(ಚಿತ್ರ: ಸಾಂದರ್ಭಿಕ)
+ There are no comments
Add yours