ಮೊಬೈಲ್ ಕಳೆದುಕೊಂಡರೆ ಹೀಗೆ ಮಾಡಿ: 70 ಮೊಬೈಲ್ ಪತ್ತೆ ಮಾಡಿದ ಚಿಕ್ಕಮಗಳೂರು ಪೊಲೀಸ್
Tumkurnews
ಚಿಕ್ಕಮಗಳೂರು: ಸಾರ್ವಜನಿಕರು ಕಳೆದುಕೊಂಡಿದ್ದ ಸುಮಾರು 7 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನುಗಳನ್ನು ಪೊಲೀಸರು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರ ಮಾಡಿದ್ದಾರೆ.
CEIR (Central Equipment Identity Register) ಪೋರ್ಟಲ್ ಬಳಸಿ ಪತ್ತೆ ಮಾಡಲಾದ ಸುಮಾರು ರೂ. 7 ಲಕ್ಷ ಮೌಲ್ಯದ 70 ಮೊಬೈಲ್ ಫೋನ್ ಗಳನ್ನು ವಾರಸುದಾರರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಿಂದಿರುಗಿಸಿದರು.
ಇದೇ ವೇಳೆ ಮಾತನಾಡಿದ ಅವರು, ಒಂದು ವೇಳೆ ಸಾರ್ವಜನಿಕರು ಮೊಬೈಲ್ ಫೋನ್ ಕಳೆದು ಕೊಂಡಲ್ಲಿ, ಮೊಬೈಲ್ ಫೋನ್ ಗೆ ಸಂಬಂಧಪಟ್ಟ ದಾಖಲಾತಿಗಳು, ಗುರುತಿನ ಪುರಾವೆ, ಪೊಲೀಸ್ ಕಂಪ್ಲೆಂಟ್ ಪ್ರತಿ ಪಡೆದು, CEIR ವೆಬ್ ಪೋರ್ಟಲ್: https://www.ceir.gov.in ರಲ್ಲಿ ವರದಿ ದಾಖಲಿಸಲಬೇಕು ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪಿ.ಐ ಗವಿರಾಜ್ ಅರ್ ಪಿ, ಪಿ.ಎಸ್.ಐ ರಘುನಾಥ ಎಸ್. ವಿ ಹಾಗೂ ಪೊಲೀಸ್ ಸಿಬ್ಬಂದಿ ಅನ್ವರ್ ಪಾಷ ಮತ್ತು ಹರಿಪ್ರಸಾದ್ ಅವರ ತಂಡ ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿದ ತಂಡದಲ್ಲಿದ್ದರು.
+ There are no comments
Add yours