ತುಮಕೂರು: ರಾಜ್ಯದಲ್ಲಿ ಶಿಕ್ಷಣ ಇಲಾಖೆ ಸತ್ತುಹೋಗಿದೆ: ನಾಲಾಯಕ್ ಶಿಕ್ಷಣ ಮಂತ್ರಿ

1 min read

 

ತುಮಕೂರು: ರಾಜ್ಯದಲ್ಲಿ ಶಿಕ್ಷಣ ಇಲಾಖೆ ಸತ್ತುಹೋಗಿದೆ: ನಾಲಾಯಕ್ ಶಿಕ್ಷಣ ಮಂತ್ರಿ

Tumkurnews
ತುಮಕೂರು: ರಾಜ್ಯದಲ್ಲಿ ಶಿಕ್ಷಣ ಇಲಾಖೆ ಸತ್ತುಹೋಗಿದೆ. ಶಿಕ್ಷಕರಿಗೆ ಎರಡು ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಅಧಿಕಾರಿಗಳನ್ನು ಕೇಳಿದರೆ ಕೆ-2 ಸಮಸ್ಯೆ ಎಂದು ಹೇಳುತ್ತಾರೆ. ವಿಧಾನ ಪರಿಷತ್ ಸದಸ್ಯನಾಗಿ ಹತ್ತಾರು ಬಾರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರನ್ನು ಭೇಟಿ ಮಾಡಿ ಸಮಸ್ಯೆಯನ್ನು ಅವರ ಗಮಕ್ಕೆ ತಂದಿದ್ದೇನೆ, ಇಷ್ಟಾಗಿಯೂ ಅವರು ಕಿವಿ ಮೇಲೆ ಹಾಕಿಕೊಂಡಿಲ್ಲ, ಇದು ಕಿವಿ, ಕಣ್ಣು ಇಲ್ಲದ ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ, ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ ನಾರಾಯಣಸ್ವಾಮಿ ಟೀಕಿಸಿದರು.

(ಚಿತ್ರ: ವೈ.ಎ ನಾರಾಯಣ ಸ್ವಾಮಿ ತುಮಕೂರಿನಲ್ಲಿ ಮತ ಯಾಚನೆ ಮಾಡಿದರು)

ತುಮಕೂರು: ಶಿಕ್ಷಕರ ಕ್ಷೇತ್ರ ಚುನಾವಣೆ: ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಮತಯಾಚನೆ
ನಗರದಲ್ಲಿ ಮತಯಾಚನೆ ಮಾಡಿ ಮತನಾಡಿದ ಅವರು, ಶಿಕ್ಷಣ ಇಲಾಖೆಗೆ ನಾಲಾಯಕ್ ಶಿಕ್ಷಣ ಮಂತ್ರಿ ಇದ್ದಾರೆ. ಮಂತ್ರಿಗೆ ಇಲಾಖೆ ಮೇಲೆ ಹಿಡಿತವಿಲ್ಲ, ಹಾಗಾಗಿ ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ಕುಣಿಯಲು ಶುರು ಮಾಡಿದ್ದಾರೆ. ಸಿಸಿಟಿವಿ ಕ್ಯಾಮರಾ, ವೆಬ್ ಕ್ಯಾಸ್ಟಿಂಗ್ ನಿರ್ವಹಿಸಲು ಗೊತ್ತಿರುವ ಅಧಿಕಾರಿಗಳಿಗೆ ಕೆ-2 ಸಮಸ್ಯೆ ಪರಿಹರಿಸಲಾಗದ ಬ್ರಹ್ಮ ವಿದ್ಯೆಯಾಗಿಬಿಟ್ಟಿದೆ ಎಂದು ಟೀಕಿಸಿದರು.
ಎರಡು ತಿಂಗಳಿನಿಂದ ಸಂಬಳವಿಲ್ಲದೆ ಶಿಕ್ಷಕರು ಪರಿತಪಿಸುತ್ತಿದ್ದಾರೆ. ಯುಗಾದಿಗೂ ಸಂಬಳ ಇಲ್ಲ, ಬಸವ ಜಯಂತಿಗೂ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ, ಸರ್ಕಾರಕ್ಕೆ, ಶಿಕ್ಷಣ ಇಲಾಖೆಗೆ ಶಿಕ್ಷಕರು ಶಾಪ ಹಾಕುತ್ತಿದ್ದಾರೆ, ಸರ್ಕಾರ ಈ ಕೂಡಲೇ ಶಿಕ್ಷಕರಿಗೆ ಸಂಬಳ ಬಿಡುಗಡೆ ಮಾಡಬೇಕು, ಇಲ್ಲವಾದರೆ ಇದೊಂದು ಅಯೋಗ್ಯ ಸರ್ಕಾರ ಎಂದು ಪರಿಗಣಿಸಬೇಕಾಗುತ್ತದೆ ಎಂದು ವೈ.ಎ.ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.

( ಚಿತ್ರ: ಮಧು ಬಂಗಾರಪ್ಪ, ಶಿಕ್ಷಣ ಸಚಿವ)

ತುಮಕೂರು: ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ; ಅಂತಿಮ ಪಟ್ಟಿಯಲ್ಲಿ 7299 ಮತದಾರರು

About The Author

You May Also Like

More From Author

+ There are no comments

Add yours