ಸಿದ್ಧಗಂಗಾ ಮಠದ ಶ್ರೀಗಳ ಅವಹೇಳನ: ಪೊಲೀಸ್ ದೂರು ದಾಖಲು

1 min read

ಸಿದ್ಧಗಂಗಾ ಮಠದ ಶ್ರೀಗಳ ಅವಹೇಳನ: ಪೊಲೀಸ್ ದೂರು ದಾಖಲು

Tumkurnews
ತುಮಕೂರು: ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಯವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಚಿತ್ರಿಸಿರುವುದರ‌ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಮೋಹನ್ ಕುಮಾರ್ ಎಂಬುವರು ಸದರಿ ಪ್ರಕರಣದ ಕುರಿತು ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಬುಧವಾರ ಲಿಖಿತ ದೂರು ಸಲ್ಲಿಸಿದ್ದಾರೆ.
ದೂರಿನಲ್ಲೇನಿದೆ?: ಸುಪ್ರಸಿದ್ಧ ಮಠಗಳಲ್ಲೊಂದಾದ ತುಮಕೂರಿನ ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಸಿದ್ದಲಿಂಗ ಮಹಾಸ್ವಾಮಿಜಿಗಳವರನ್ನು “ಚರಣ್ ಐವರ್ನಾಡು” ಎಂಬ ವ್ಯಕ್ತಿಯು ತನ್ನ ಸಾಮಾಜಿಕ ಜಾಲತಾಣ ಮುಖಪುಟದಲ್ಲಿ ದಿನಾಂಕ 23/9 / 2023 ರಂದು ನಮ್ಮ ಸಿದ್ಧಗಂಗಾ ಮಠದ ಪರಮಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಜಿಗಳವರ ಬಗ್ಗೆ ಅವಹೇಳನಕಾರಿಯಾಗಿ ಬರೆದುಕೊಂಡಿರುತ್ತಾನೆ. ಸ್ವಾಮಿಗಳವರು ರಿಪಬ್ಲಿಕ್ ಕನ್ನಡ ಎಂಬುವ ಸುದ್ದಿ ಮಾಧ್ಯಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅದರ ಭಾವಚಿತ್ರದ ದೃಶ್ಯವನ್ನು ಉಲ್ಲೇಖಿಸಿ “ಮುಜೆ ಡ್ರಗ್ ದೋ… ಮುಜೆ ಡ್ರಗ್ ದೋ..” ಎಂಬ ದಿವ್ಯವಾಣಿ ಸ್ವಾಮೀಜಿಯ ಕಣ್ಣುಗಳನ್ನು ಉದ್ದ ಅಗಲ ತೆರೆದಿವೆ ! ” ಎಂದು ಅವಹೇಳನಕಾರಿಯಾಗಿ ಸಂಬೋಧಿಸಿದ್ದು, ಇದು ಅಸಂಖ್ಯಾತ ಸಿದ್ಧಗಂಗಾ ಮಠದ ಭಕ್ತರ ಭಾವನೆಗೆ ಧಕ್ಕೆ ಮಾಡುವಂತಹ ಅಸಂಬದ್ಧ ಪದ ಬಳಕೆಯಾಗಿದೆ. ಇಂಥ ನೀಚ ಮನಸ್ಥಿತಿ ಮತ್ತು ಅಸಂಬದ್ಧ ಪದಗಳನ್ನ ಉಪಯೋಗಿಸಿ ಕ್ರೌರ್ಯತೆಯನ್ನು ಮೆರೆದಿದ್ದಾರೆ. ಸಿದ್ಧಗಂಗಾ ಮಠವು ವೀರಶೈವ ಲಿಂಗಾಯತ ಮಠವಾಗಿದ್ದು ಯಾವುದೇ ಜಾತಿ, ಭೇದ, ಧರ್ಮ, ಮತವನ್ನು ಲೆಕ್ಕಿಸದ ಶಿಕ್ಷಣ, ದಾಸೋಹ, ಆಶ್ರಯ ನೀಡುತ ಬಂದಿರುವ ಶ್ರೀ ಮಠಕ್ಕೆ ತನ್ನದೇ ಆದಂತಹ ಹೆಸರಾಗಿರುವಂತಹ ಮಠದ ಪರಮಪೂಜ್ಯ ಸಿದ್ದಲಿಂಗ ಮಹಾಸ್ವಾಮೀಜಿಗಳವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ನಂತರ, ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಜಾಲತಾಣದ ಮುಖಪುಟದಿಂದ ಅಳಿಸಿ ಹಾಕಿರುತ್ತಾರೆ. ಡಿಲೀಟ್‌ ಮಾಡಿರುವ ಅವಹೇಳನಕಾರಿ ಪದ ಬಳಕೆಯನ್ನು ಖಂಡಿಸುತ್ತಾ ಈ ವ್ಯಕ್ತಿಯ ಮೇಲೆ ಕೂಡಲೇ ಸಮರ್ಪಕವಾದ ಕೇಸ್ ದಾಖಲು ಮಾಡಿ ಕಾನೂನು ಕ್ರಮಕ್ಕೆ ಮುಂದಾಗ ಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ದೂರುದಾರರು ಮನವಿ ಮಾಡಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ: ತುಮಕೂರಿನಲ್ಲಿ ಆರಂಭದಲ್ಲೇ ಅಪಸ್ವರ: ದೇವೇಗೌಡರ ಸ್ಪರ್ಧೆಗೆ ವಿರೋಧ

About The Author

You May Also Like

More From Author

+ There are no comments

Add yours