ಲಾರಿ- ಕಾರು ಮುಖಾಮುಖಿ ಡಿಕ್ಕಿ: ಮೂವರು ಯುವಕರು ಸಾವು
Tumkurnews
ತುಮಕೂರು: ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಬಳಿ ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಧುಗಿರಿ V/S ತಿಪಟೂರು ಜಿಲ್ಲಾ ಕೇಂದ್ರ: ಮಹತ್ವದ ಘೋಷಣೆ ಮಾಡಿದ ಸಿಎಂ
ಮೃತರನ್ನು ಪಾವಗಡ ತಾಲ್ಲೂಕಿನ ಗುಜ್ಜನಡು ಗ್ರಾಮದ ಆಕಾಶ್(20), ಹೇಮಂತ್(28) ಹಾಗೂ ಕಾರ್ತಿಕ್(28) ಎಂದು ಗುರುತಿಸಲಾಗಿದೆ. ಉಜ್ವಲ್ ಕೃಷ್ಣ ಎಂಬಾತ ಗಾಯಗೊಂಡಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮೃತರು ಬೆಂಗಳೂರಿನಿಂದ ಪಾವಗಡದ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಮಂಗಳವಾರ ಬೆಳಗಿನ ಜಾವ ಘಟನೆ ಸಂಭವಿಸಿದೆ.
ಮಧುಗಿರಿ ಏಕೆ ಜಿಲ್ಲೆಯಾಗಬೇಕು? ಇಲ್ಲಿವೆ 10 ಕಾರಣಗಳು: ಓದಿ
+ There are no comments
Add yours