ಇಬ್ಬರ ಬಲಿ ಪಡೆದ ಫ್ರೀ ಬಸ್: ಗೊರವನಹಳ್ಳಿ ಲಕ್ಷ್ಮಿಗೆ ಬಂದವರ ಸಾವು: ವಿಡಿಯೋ

1 min read

ಫ್ರೀ ಬಸ್ ಎಂದು ಸುತ್ತಾಡಲು ಬಂದು ಪ್ರಾಣ ಕಳೆದುಕೊಂಡ ಮಹಿಳೆಯರು: ವಿಡಿಯೋ

Tumkurnews
ತುಮಕೂರು: ಫ್ರೀ ಬಸ್ ಎಂದು ಸುತ್ತಾಡಲು ಬಂದಿದ್ದ ಇಬ್ಬರು ಮಹಿಳೆಯರು ಬಸ್ ಹತ್ತುವ ಪೈಪೋಟಿಯಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ಶುಕ್ರವಾರ ನಡೆದಿದೆ.
ತುಮಕೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದ್ದು, ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮದ ನಿವಾಸಿಗಳಾದ ಪುಟ್ಟತಾಯಮ್ಮ(60) ಹಾಗೂ ಪಂಕಜ(55) ಮೃತ ಮಹಿಳೆಯರು.

ಎರಡು ಬಸ್’ಗಳ ನಡುವೆ ಸಿಲುಕಿ ಮಹಿಳೆಯರ ಸಾವು; KSRTC ಬಸ್ ನಿಲ್ದಾಣದಲ್ಲಿ‌ ಘಟನೆ
ಒಟ್ಟು ಆರು ಮಹಿಳೆಯರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನಕ್ಕೆಂದು ತುಮಕೂರಿಗೆ ಬಂದಿದ್ದರು.
ಬಸ್ ನಿಲ್ದಾಣದಲ್ಲಿ ಆಗಷ್ಟೇ ಕೊರಟಗೆರೆಯಿಂದ ಬಂದು ನಿಂತ ಬಸ್’ನಿಂದ ಜನ ಇಳಿಯುತ್ತಿದ್ದರು. ಒಂದು ಬಸ್ ತುಮಕೂರು- ಕೊರಟಗೆರೆ ಮತ್ತೊಂದು ಬಸ್ ತುಮಕೂರು ಕೊರಟಗೆರೆ ಮಾರ್ಗವಾಗಿ ಗೌರಿಬಿದನೂರು ಹೋಗುವುದಿತ್ತು.

ತಬಸುಮ್ ಜಹೇರಾರನ್ನು ಜೈಲಿಗೆ ಕಳುಹಿಸಿದ್ದು ಇವರೇ ನೋಡಿ! ಇಲ್ಲಿದೆ ವಿಡಿಯೋ
ಮೃತ‌ ಮಹಿಳೆಯರು ತುಮಕೂರು-ಕೊರಟಗೆರೆ ಬಸ್ ಹತ್ತುವಾಗ ಈ ಎರಡೂ ಬಸ್’ಗಳ‌ ನಡುವಿನ ಮುಂಭಾಗದಲ್ಲಿ ಸಿಲುಕಿಕೊಂಡು ಉಜ್ಜಲ್ಪಟ್ಟಿದ್ದಾರೆ. ಎರಡು ಬಸ್’ಗಳ ನಡುವೆ ಸಿಲುಕಿ ಉಸಿರಾಡಲು ಆಗದೆ ಇಬ್ಬರು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದರು.
ವಿಡಿಯೋ ಇಲ್ಲಿದೆ..

About The Author

You May Also Like

More From Author

+ There are no comments

Add yours