ಹಳ್ಳಿ ಗುಗ್ಗು ಎಂದು ಹೀಯಾಳಿಸುತ್ತಿದ್ದ ಪತ್ನಿ: ಮೆಟ್ರೋ ಇಂಜಿನಿಯರ್ ಆತ್ಮಹತ್ಯೆ

1 min read

 

ಪತ್ನಿಯ ಕಿರುಕುಳ ತಾಳಲಾರದೆ ಮೆಟ್ರೋ ಇಂಜಿನಿಯರ್ ಆತ್ಮಹತ್ಯೆ

Tumkurnews
ತುಮಕೂರು: ಪತ್ನಿಯ ‌ಕಿರುಕುಳ ತಾಳಲಾರದೇ ಪತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಿಪಟೂರು ತಾಲ್ಲೂಕು ಕೆ.ಬಿ.ಕ್ರಾಸ್ ಸಮೀಪದ ಕುಂದೂರು ಪಾಳ್ಯದ ನಿವಾಸಿ ಮಂಜುನಾಥ್(38) ಮೃತ ದುರ್ದೈವಿಯಾಗಿದ್ದು, ನೇಣಿಗೆ ಶರಣಾದ ಎರಡು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ತಬಸುಮ್ ಜಹೇರಾರನ್ನು ಜೈಲಿಗೆ ಕಳುಹಿಸಿದ್ದು ಇವರೇ ನೋಡಿ! ಇಲ್ಲಿದೆ ವಿಡಿಯೋ
ಮೃತ ಮಂಜುನಾಥ್‌ ಬೆಂಗಳೂರಿನ ನಮ್ಮ ಮೆಟ್ರೊ (ಬಿಎಂಆರ್‌ಸಿಎಲ್)ದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಹಳ್ಳಿ ಗುಗ್ಗು ಎನ್ನುತ್ತಿದ್ದಳು ಪತ್ನಿ: ಮಂಜುನಾಥ್ ಅವರು ಕಳೆದ 10 ವರ್ಷಗಳ ಹಿಂದೆ ತುರುವೇಕೆರೆ ತಾಲ್ಲೂಕಿನ ಪ್ರಿಯಾಂಕ ಎಂಬಾಕೆಯನ್ನು ವಿವಾಹ ಮಾಡಿಕೊಂಡಿದ್ದರು. ಆದರೆ ಮದುವೆಯಾದ ಬಳಿಕ ದಂಪತಿಗಳ ನಡುವೆ ಹೊಂದಾಣಿಕೆಯಾಗಿರಲಿಲ್ಲ.

ತಬಸುಮ್ ಜಹೇರಾ KAS ಜೈಲಿಗೆ ಹೋಗುತ್ತಿರುವ ದೃಶ್ಯ: ಎಕ್ಸ್’ಕ್ಲೂಸಿವ್ ವಿಡಿಯೋ
ಪತ್ನಿ ಪ್ರಿಯಾಂಕ ಪತಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎನ್ನಲಾಗಿದೆ. ಪತ್ನಿ ತನ್ನನ್ನು ಸದಾ ಹೀಯಾಳಿಸುತ್ತಾಳೆ, ‘ಹಳ್ಳಿ ಗುಗ್ಗು, ನಿನಗೆ ಏನೂ ಗೊತ್ತಿಲ್ಲ, ಈ ಮದುವೆ ನನಗೆ ಇಷ್ಟವಿರಲಿಲ್ಲ’ ಎಂದು ಅವಮಾನಿಸುತ್ತಾಳೆ, ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮಂಜುನಾಥ್ ವಾಯ್ಸ್ ರೆಕಾರ್ಡ್ ಮಾಡಿ ಅದನ್ನು ತನ್ನ ಸಹೋದರರಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದೇ‌ ಜಿಲ್ಲೆ, ಒಂದೇ ಊರಿನಲ್ಲಿ ಐಎಎಸ್, ಐಪಿಎಸ್ ಜೋಡಿ! ಮಾಡಿದೆ ಮೋಡಿ
ದೂರು ದಾಖಲು: ಈ ಆಡಿಯೋ ರೆಕಾರ್ಡ್ ಆಧಾರದ ಮೇಲೆ ಪತ್ನಿ ಪ್ರಿಯಾಂಕ ವಿರುದ್ಧ ತಿಪಟೂರು ತಾಲ್ಲೂಕು ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

You May Also Like

More From Author

+ There are no comments

Add yours