ಒಂದೇ‌ ಜಿಲ್ಲೆ, ಒಂದೇ ಊರಿನಲ್ಲಿ ಐಎಎಸ್, ಐಪಿಎಸ್ ಜೋಡಿ! ಮಾಡಿದೆ ಮೋಡಿ

1 min read

 

ಒಂದೇ‌ ಜಿಲ್ಲೆ, ಒಂದೇ ಊರಿನಲ್ಲಿ ಐಎಎಸ್, ಐಪಿಎಸ್ ಜೋಡಿ! ಮಾಡಿದೆ ಮೋಡಿ

Tumkurnews
ತುಮಕೂರು: ಐಎಎಸ್, ಐಪಿಎಸ್ ದಂಪತಿಗಳು ಒಂದೇ ಜಿಲ್ಲೆಯಲ್ಲಿ ಸೇವೆ ಮಾಡುವ ಮೂಲಕ ಇದೀಗ ರಾಜ್ಯದ ಗಮನ ಸೆಳೆದಿದ್ದಾರೆ.
ತುಮಕೂರು ಜಿಲ್ಲೆಯು ಇಂತದ್ದೊಂದು ಅಪರೂಪದ ಪ್ರಕರಣಕ್ಕೆ ಸಾಕ್ಷಿಯಾಗಿದೆ. ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ವಿ ಅಶೋಕ್ ಅವರು ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ್ದಾರೆ. ಇದಕ್ಕೂ ಮುನ್ನ ಕೆಲವು ತಿಂಗಳ ಹಿಂದಷ್ಟೇ ‌ಅವರ ಪತ್ನಿ ಐಎಎಸ್ ಅಧಿಕಾರಿ ಅಶ್ವಿಜಾ ಅವರು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಐಎಎಸ್, ಐಪಿಎಸ್ ಜೋಡಿ ಒಂದೇ ಜಿಲ್ಲೆಯಲ್ಲಿ ಸೇವೆಗೆ ಬರುವ ಮೂಲಕ ರಾಜ್ಯದ ಅಧಿಕಾರಿಗಳ ವಲಯದಲ್ಲಿ ಹುಬ್ಬೇರಿಸುವಂತೆ ಮಾಡಿದ್ದಾರೆ.
ಅಪರೂಪ ಏಕೆ?: ಸಾಮಾನ್ಯವಾಗಿ ಸರ್ಕಾರಿ ನೌಕರಿಯಲ್ಲಿರುವ ದಂಪತಿಗಳು ಒಂದೇ ಜಿಲ್ಲೆ ಅಥವಾ ಒಂದೇ ಊರಿನಲ್ಲಿ ಹುದ್ದೆ ಪಡೆಯುವುದು ಅಪರೂಪ. ಬಹಳಷ್ಟು ಪ್ರಕರಣಗಳಲ್ಲಿ ಶಿಕ್ಷಕರು ಸೇರಿದಂತೆ ಇತರೆ ಸರ್ಕಾರಿ ನೌಕರ, ಸಿಬ್ಬಂದಿ ದಂಪತಿಗಳು ಒಂದೇ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಪರದಾಡುವುದು ಗೊತ್ತೇ ಇದೆ. ಅಂತದ್ದರಲ್ಲಿ ಇಬ್ಬರು ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳಿಗೆ ಈ ಅವಕಾಶ ಸಿಕ್ಕರೆ ಅದು‌ ಅದೃಷ್ಟವಲ್ಲದೇ ಮತ್ತೇನು ಎನ್ನುವುದು ಅಧಿಕಾರಿ ವಲಯಗಳ ಮಾತು.
ಐಎಎಸ್, ಐಪಿಎಸ್ ಅಂತಹ ನಾಗರಿಕ ಸೇವಾ ವಲಯಗಳಲ್ಲಿ ಇದು ಅಪರೂಪದಲ್ಲಿ ಅಪರೂಪ. ಒಂದೇ ರಾಜ್ಯ, ಒಂದೇ ಜಿಲ್ಲೆಯಲ್ಲಿ ಐಎಎಸ್, ಐಪಿಎಸ್ ದಂಪತಿಗಳು ಸೇವೆಗೆ ಅವಕಾಶ ಪಡೆಯುವುದು ಅದೃಷ್ಟವೇ ಸರಿ ಎನ್ನುತ್ತಾರೆ ಅಧಿಕಾರಿಗಳು.

ನೂತನ ಎಸ್.ಪಿ ಅಶೋಕ್ ಕೆ.ವಿ ಅಧಿಕಾರ ಸ್ವೀಕಾರ
ಯಾರು ಈ ಅದೃಷ್ಟಶಾಲಿ ದಂಪತಿ?: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಬಂದಿರುವ ಐಪಿಎಸ್ ಅಧಿಕಾರಿ ಅಶೋಕ್ ಕೆ.ವಿ 2017ನೇ ಬ್ಯಾಚ್’ನವರು ಮತ್ತು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಬಂದಿರುವ ಐಎಎಸ್ ಅಧಿಕಾರಿ ಅಶ್ವಿಜಾ 2019ನೇ ಬ್ಯಾಚ್’ನವರು. ಒಟ್ಟಿನಲ್ಲಿ ಜನರ‌ ಗಮನ ಸೆಳೆದಿರುವ ಈ ಅಧಿಕಾರಿ ದಂಪತಿಗಳ ಮೇಲೆ ಜನತೆಯ ನಿರೀಕ್ಷೆ ಹೆಚ್ಚಾಗಿದ್ದು, ಜಿಲ್ಲೆಗೆ ಇವರಿಂದ ಉತ್ತಮ ಸೇವೆ ಲಭಿಸಲಿ ಎಂದು ಜನ ಬಯಸಿದ್ದಾರೆ.

ತುಮಕೂರಿನಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದ ತಬಸುಮ್ ಜಹೇರಾಗೆ ಜೈಲು ಶಿಕ್ಷೆ: ಯಾಕೆ? ಏನಾಯ್ತು?

About The Author

You May Also Like

More From Author

+ There are no comments

Add yours