ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರೀಕರಣ ಯೋಜನೆಯ ಸಂಚಾರಿ ಪ್ರಚಾರ ವಾಹನಕ್ಕೆ ಸಚಿವ ಡಾ:ಜಿ. ಪರಮೇಶ್ವರ್ ಚಾಲನೆ
Tumkurnews
ತುಮಕೂರು: ಕೃಷಿ ಇಲಾಖೆ ವತಿಯಿಂದ ಆತ್ಮ ನಿರ್ಭರ್ ಯೋಜನೆಯಡಿ ಕೈಗೊಳ್ಳಲಾಗಿರುವ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರೀಕರಣ ಯೋಜನೆ ಕುರಿತು ಪ್ರಚಾರಕ್ಕಾಗಿ ಸಂಚಾರಿ ವಾಹನಕ್ಕೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಜಿ.ಬಿ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ., ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಉಪನಿರ್ದೇಶಕರಾದ ದೀಪಶ್ರೀ, ಅಶೋಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
18 ವರ್ಷ ತುಂಬಿದೆಯೇ? ತೆಂಗು ಉದ್ದಿಮೆ ಆರಂಭಿಸಿ, ಪಡೆಯಿರಿ 15 ಲಕ್ಷ ರೂ.ವರೆಗೆ ಸಹಾಯ ಧನ!
+ There are no comments
Add yours