ತುಮಕೂರು: ಲಂಚ ಪಡೆಯುತ್ತಿದ್ದ ಇಂಜಿನಿಯರ್ ಲೋಕಾಯುಕ್ತ ಬಲೆಗೆ

1 min read

ಒಂದು ಲಕ್ಷ ಬೇಡಿಕೆ ಇಟ್ಟು, 15,000 ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

Tumkurnews
ತುಮಕೂರು: ರೈತರೊಬ್ಬರ ಜಮೀನು ಪೋಡಿ ಮಾಡಲು ಎನ್ಓಸಿ ನೀಡಲು ಒಂದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ 15 ಸಾವಿರ ರೂ. ಲಂಚ ಪಡೆಯುತ್ತಿದ್ದ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ತುಮಕೂರು ನಗರದ ಬನಶಂಕರಿ 2ನೇ ಹಂತದಲ್ಲಿರುವ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇ ಕಾಶಿ ವಿಶ್ವನಾಥ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ.

ಸಿಎಂ ಸಿದ್ದು ಮಧುಗಿರಿ ಭೇಟಿ: ಪರಂ, ರಾಜಣ್ಣ ಜಂಟಿ‌ ಸುದ್ದಿಗೋಷ್ಠಿ
ತುಮಕೂರಿನ ರೈತರೊಬ್ಬರಿಂದ 1 ಎಕರೆ 7ಗುಂಟೆ ಜಮೀನಿನಲ್ಲಿ ನಾಲ್ಕು ಗುಂಟೆ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸೇರಿದ್ದು, ಅದನ್ನ ಪೋಡಿ ಮಾಡಲು ಇಲಾಖೆಯಿಂದ ಎನ್ಒಸಿ ನೀಡಬೇಕಿತ್ತು. ಆದರೆ ಕಳೆದ 4 ವರ್ಷದಿಂದ ಎನ್ಓಸಿ ಪತ್ರ ನೀಡಿರಲಿಲ್ಲ. ಪತ್ರ ನೀಡುವ ಸಲುವಾಗಿ ಕಾಶಿ ವಿಶ್ವನಾಥ್ ಅವರು ರೈತರಿಂದ 1 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 15 ಸಾವಿರ ರೂ.ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಆರೋಪಿ ಕಾಶಿ ವಿಶ್ವನಾಥ್ ರೆಡ್ ಹ್ಯಾಂಡಾಗಿ ಸಿಕ್ಕು ಬಿದ್ದಿದ್ದಾರೆ.
ಲೋಕಾಯುಕ್ತ ಎಸ್.ಪಿ ವಲ್ಲಿ ಭಾಷಾ ಅವರ ನೇತೃತ್ವದಲ್ಲಿ ಡಿವೈಎಸ್ಪಿ ಗಳಾದ ಮಂಜುನಾಥ್, ಹರೀಶ್ ಇನ್ಸ್ ಪೆಕ್ಟರ್ ಗಳಾದ ಸತ್ಯನಾರಾಯಣ್, ಸಲೀಂ, ಶಿವರುದ್ರಪ್ಪ ಮೇಟಿ , ರಾಮರೆಡ್ಡಿ ಸೇರಿದಂತೆ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಹೇಗಿದೆ ನೋಡಿ: ವಿಡಿಯೋ

About The Author

You May Also Like

More From Author

+ There are no comments

Add yours