ಕರಾಮುವಿ; ವಿವಿಧ ಕೋರ್ಸ್‌ಗಳ ಪ್ರವೇಶಾತಿ: ಕಡೆಯ ದಿನಾಂಕ ಪ್ರಕಟ

1 min read

 

ವಿವಿಧ ಕೋರ್ಸ್‌ಗಳ ಪ್ರಥಮ ವರ್ಷದ ಪ್ರವೇಶಾತಿ: ಕಡೆಯ ದಿನ ಪ್ರಕಟ

Tumkurnews
ತುಮಕೂರು: ತುಮಕೂರಿನ ಕರಾಮುವಿ ಪ್ರಾದೇಶಿಕ ಕೇಂದ್ರದಲ್ಲಿ ಸ್ನಾತಕ/ಸ್ನಾತಕೋತ್ತರ ಕೋರ್ಸ್‍ಗಳಾದ ಬಿ.ಎ., ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಬಿ.ಎಲ್.ಐ.ಎಸ್ಸಿ., ಬಿ.ಎಸ್ಸಿ, ಎಂ.ಎ., ಎಂ.ಸಿ.ಜೆ., ಎಂ.ಕಾಂ., ಎಂ.ಎಲ್.ಐ.ಎಸ್ಸಿ., ಎಂ.ಎಸ್ಸಿ. ಎಂ.ಬಿ.ಎ., ಬಿ.ಎಸ್.ಡಬ್ಲ್ಯೂ/ ಎಂ.ಎಸ್.ಡಬ್ಲ್ಯೂ/ಎಂ.ಸಿ.ಎ., ಮತ್ತು ಪಿ.ಜಿ. ಡಿಪ್ಲೋಮಾ., ಡಿಪ್ಲೋಮಾ., ಸರ್ಟಿಫಿಕೇಟ್ ಪ್ರೋಗ್ರಾಮ್ಸ್’ಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದ್ದು, ಪ್ರಥಮ ವರ್ಷದ ಕೋರ್ಸ್‍’ಗಳ ಪ್ರವೇಶಾತಿಗೆ 2023ರ ಆಗಸ್ಟ್ 31 ಕಡೆಯ ದಿನಾಂಕವಾಗಿರುತ್ತದೆ.
ಯುಜಿಸಿ ನಿಯಮಾವಳಿ ಪ್ರಕಾರ ಮುಕ್ತ ವಿಶ್ವವಿದ್ಯಾನಿಲಯಗಳ ದೂರಶಿಕ್ಷಣದ ಪದವಿ ಮತ್ತು ಸಾಂಪ್ರದಾಯಿಕ ವಿ.ವಿ.ಗಳು ನೀಡುವ ಶಿಕ್ಷಣ ಕ್ರಮಗಳ ಪದವಿಗಳಿಗೆ ಸಮಾನವಾಗಿರುತ್ತದೆ. ಪ್ರಥಮ ವರ್ಷದ ಪ್ರವೇಶಾತಿ ಶುಲ್ಕದ ವಿವರ: ಬಿ.ಎ-ರೂ.7,700/-., ಬಿ.ಕಾಂ-ರೂ.8,200/-., ಬಿ.ಸಿ.ಎ/ಬಿ.ಎಸ್ಸಿ-ರೂ.22,500/-., ಬಿ.ಬಿ.ಎ/ಬಿ.ಎಲ್.ಐ.ಎಸ್ಸಿ-ರೂ.11,500/-., ಎಂ.ಎ-ರೂ.9,800/-., ಬಿ.ಎಸ್.ಡಬ್ಲ್ಯೂ-ರೂ.12,000/-., ಎಂ.ಎಸ್ಸಿ/ಎಂ.ಬಿ.ಎ/ಎಂ.ಸಿ.ಎ-ರೂ.28,000/, ಎಂ.ಸಿ.ಜೆ-ರೂ.15,100/-., ಎಂ.ಕಾಂ-ರೂ.11,500/-., ಎಂ.ಎಸ್.ಡಬ್ಲ್ಯೂ-ರೂ.20,000/-., ಎಂ.ಎಲ್.ಐ.ಎಸ್ಸಿ-ರೂ.17,000/- ಗಳಾಗಿರುತ್ತದೆ. ಮೇಲ್ಕಂಡ ಪದವಿಗಳಿಗೆ ಅನ್‍ಲೈನ್‍ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ತುಮಕೂರಿನ ಕರಾಮುವಿ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಅನ್‍ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದು.
ಹೆಚ್ಚಿನ ವಿವರಗಳಿಗಾಗಿ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಪ್ರಾದೇಶಿಕ ಕೇಂದ್ರ ತುಮಕೂರು, ಟೂಡಾ ಲೇಔಟ್, ರಾಜೀವ್‍ಗಾಂಧಿ ನಗರ, ಗಂಗಸಂದ್ರ ಮುಖ್ಯರಸ್ತೆ, ಮೆಳೆಕೋಟೆ, ತುಮಕೂರು-572105 ದೂರವಾಣಿ ಸಂಖ್ಯೆ- 0816-2955580, ಮೊ.ಸಂ. 9844506629, 9886112434, 7349474339ನ್ನು ಸಂಪರ್ಕಿಸಬಹುದೆಂದು ಪ್ರಾದೇಶಿಕ ನಿರ್ದೇಶಕರಾದ ಡಾ. ಲೋಕೇಶ. ಆರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

You May Also Like

More From Author

+ There are no comments

Add yours