ತೆಂಗು ಗೊನೆಗಾರರಿಗೆ ಕೇರಾ ಸುರಕ್ಷಾ ವಿಮಾ ಯೋಜನೆ
Tumkurnews
ತುಮಕೂರು: ತೆಂಗು ಗೊನೆಗಾರರಿಗೆ “ಕೇರಾ ಸುರಕ್ಷಾ ವಿಮಾ” ವೈಯಕ್ತಿಕ ಅಪಘಾತ ವಿಮಾ ಯೋಜನೆಯನ್ನು ತೆಂಗು ಅಭಿವೃದ್ದಿ ಮಂಡಳಿಯವರು “ದಿ ನ್ಯೂ ಇಂಡಿಯಾ ವಿಮಾ ಕಂಪನಿಯ” ಸಹಯೋಗದಲ್ಲಿ ಅನುಷ್ಟಾನಗೊಳಿಸುತ್ತಿದ್ದು, ಯಾವುದೇ ಅಪಘಾತ ಸಂಭವಿಸಿದರೂ ಕೇರಾ ಸುರಕ್ಷಾ ವಿಮಾ ಯೋಜನೆಯಡಿಯಲ್ಲಿ ಈ ಕೆಳಕಂಡ ಸೌಲಭ್ಯಗಳು ಲಭ್ಯವಿರುತ್ತವೆ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತುಮಕೂರು ತಾಲೂಕಿನಲ್ಲಿ ಸುಮಾರು 14455.32 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ತೆಂಗಿನ ಮರ ಹತ್ತುವವರು, ತೆಂಗಿನಕಾಯಿ ಕೀಳುವವರು, ನೀರಾ ತಂತ್ರಜ್ಞರು ಅಪಘಾತಕ್ಕೊಳಗಾಗಿ ಮರಣ ಹೊಂದಿದ್ದಲ್ಲಿ ಅಥವಾ ಅಂಗವಿಕಲರಾದಲ್ಲಿ ವಿಮಾ ಕಂಪನಿಯಿಂದ ದೊರಕುವ ವಿಮಾ ಮೊತ್ತದ ಆರ್ಥಿಕ ಸಹಾಯ ಇರುತ್ತದೆ(ದುರ್ಘಟನೆ, ಅಪಘಾತ ಆದ 7 ದಿನಗಳ ಒಳಗಾಗಿ ತೆಂಗು ಅಭಿವೃದ್ದಿ ಮಂಡಳಿಗೆ ಮಾಹಿತಿ ತಲುಪಬೇಕಾಗುತ್ತದೆ). ಮರಣ ಹೊಂದಿದ್ದಲ್ಲಿ – 5 ಲಕ್ಷ ರೂಗಳು, ಶಾಶ್ವತ ಭಾಗಶಃ ಅಂಗವಿಕಲತೆ ಹೊಂದಿದ್ದಲ್ಲಿ – 2.50 ಲಕ್ಷ ರೂ.ಗಳು, ಆಸ್ಪತ್ರೆ ವೆಚ್ಚ -1 ಲಕ್ಷ ರೂ.ಗಳು (ಗರಿಷ್ಟ), ತಾತ್ಕಾಲಿಕ ಅಂಗವಿಕಲತೆಯನ್ನು ಹೊಂದುವ ಕೊಯ್ಲುಗಾರನಿಗೆ ರೂ.18000 (ರೂ. 3000 ಪ್ರತಿ ವಾರ), ಆಂಬುಲೆನ್ಸ್ ಖರ್ಚು – ರೂ. 3000 ಹಾಗೂ ಪಾಲಿಸಿದಾರ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ರೂ. 5000, ವಾರ್ಷಿಕ ವಿಮಾ ಒಟ್ಟು ಕಂತು ರೂ. 375 ಗಳಾಗಿದ್ದು, ಈ ಪೈಕಿ ಶೇ. 75:25ರಂತೆ ತೆಂಗು ಅಭಿವೃದ್ದಿ ಮಂಡಳಿಯ ವಂತಿಕೆ ರೂ.281 ಮತ್ತು ರೈತರ ವಂತಿಕೆ ರೂ. 94 ಆಗಿರುತ್ತದೆ (ರೈತರ ವಂತಿಕೆಯನ್ನು ತೆಂಗು ಅಭಿವೃದ್ದಿ ಮಂಡಳಿಗೆ ಡಿಡಿ ಮೂಲಕ, ಆನ್ ಲೈನ್ ಮೂಲಕ ಪಾವತಿಸಬಹುದಾಗಿರುತ್ತದೆ).
ಸಲ್ಲಿಸಬೇಕಾದ ದಾಖಲಾತಿಗಳು:
ತೆಂಗು ಅಭಿವೃದ್ಧಿ ಮಂಡಳಿಯ ನಿಗದಿತ ಅರ್ಜಿ ನಮೂನೆ, ಆಧಾರ್ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ರೈತರ ವಾರ್ಷಿಕ ವಂತಿಕೆ ಪಾವತಿಸಿದ ರಶೀದಿ (ತೆಂಗಿನ ಮರ ಹತ್ತುವವರು, ತೆಂಗಿನ ಕಾಯಿ ಕೀಳುವವರು, ನೀರಾ ತಂತ್ರಜ್ಞನರು ವಾರ್ಷಿಕ ವಂತಿಕೆ 94 ರೂ.ಗಳನ್ನು ಪಾವತಿಸಲು ಡಿಡಿ ಮೂಲಕ ತೆಂಗು ಅಭಿವೃದ್ಧಿ ಮಂಡಳಿ, ಕೊಚ್ಚಿ ಪಾವತಿಸಬಹುದು ಅಥವಾ ಎನ್‍ಇಎಫ್‍ಟಿ, ಬೀಮ್, ಪೋನ್ ಪೇ, ಗೂಗಲ್ ಪೇ, ಪೇ-ಟಿಎಂ ಮೂಲಕ ಪಾವತಿಸಬಹುದು.
ಹೆಚ್ಚಿನ ಮಾಹಿತಿಗೆ ಜಯಂತ್, ಸಹಾಯಕ ತೋಟಗಾರಿಕೆ ಅಧಿಕಾರಿ (ರೈತ ಸಂಪರ್ಕ ಕೇಂದ್ರ) ಕಸಬಾ – 8095003877, ದರ್ಶನ್, ಸಹಾಯಕ ತೋಟಗಾರಿಕೆ ಅಧಿಕಾರಿ (ರೈತ ಸಂಪರ್ಕ ಕೇಂದ್ರ) ಹೆಬ್ಬೂರು – 9538287992, ಅಂಜನ್ ಕುಮಾರ್, ಸಹಾಯಕ ತೋಟಗಾರಿಕೆ ಅಧಿಕಾರಿ (ರೈತ ಸಂಪರ್ಕ ಕೇಂದ್ರ) ಕೋರ- 8970870918, ಕವಿತ, ಸಹಾಯಕ ತೋಟಗಾರಿಕೆ ಅಧಿಕಾರಿ (ರೈತ ಸಂಪರ್ಕ ಕೇಂದ್ರ) ಗೂಳೂರು – 9620691223, ವರಲಕ್ಷ್ಮಿ, ಸಹಾಯಕ ತೋಟಗಾರಿಕೆ ಅಧಿಕಾರಿ (ರೈತ ಸಂಪರ್ಕ ಕೇಂದ್ರ) ಬೆಳ್ಳಾವಿ – 7022679182, ಶಿವಕುಮಾರ್, ಸಹಾಯಕ ತೋಟಗಾರಿಕೆ ಅಧಿಕಾರಿ (ರೈತ ಸಂಪರ್ಕ ಕೇಂದ್ರ)ಊರ್ಡಿಗೆರೆ- 7892664483 ಮೂಲಕ ಪಡೆಯಬಹುದಾಗಿರುತ್ತದೆ ಎಂದು ತುಮಕೂರು ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಲ್ಕು ತಿಂಗಳಲ್ಲಿ 47 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಜಿಲ್ಲೆಯಲ್ಲಿ 174 ಪೋಕ್ಸೊ ಕೇಸ್ ದಾಖಲು
+ There are no comments
Add yours