ಗಮನಿಸಿ; ಆ.19ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ
Tumkurnews
ತುಮಕೂರು: ತುಮಕೂರು ನಗರ ಉಪವಿಭಾಗ-1ರ ಎಸ್.ಎಸ್.ಪುರಂ ಶಾಖಾ ವ್ಯಾಪ್ತಿಗೆ ಸಂಬಂಧಿಸಿದಂತೆ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಆಗಸ್ಟ್ 19ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಸ್.ಎಸ್.ಪುರಂ, ಎಸ್.ಐ.ಟಿ., ಸಿದ್ಧಗಂಗಾ ಬಡಾವಣೆ ಸುತ್ತಮುತ್ತ, ಅಶೋಕ ನಗರ, ಡೋಬಿಘಾಟ್ ರಸ್ತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9449844326ನ್ನು ಸಂಪರ್ಕಿಸಬಹುದಾಗಿದೆ.
***********
ತುಮಕೂರು: ಕ್ಯಾತ್ಸಂದ್ರ ಉಪವಿಭಾಗ ವ್ಯಾಪ್ತಿಗೆ ಸಂಬಂಧಿಸಿದಂತೆ ಲಿಂಕ್ ಲೈನ್ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಆಗಸ್ಟ್ 19ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೆಸರುಮಡು ಗ್ರಾಮಪಂಚಾಯತಿ ವ್ಯಾಪ್ತಿಯ ಪ್ರದೇಶ, ಗೋಕುಲ ಬಡಾವಣೆ, ಬಡ್ಡಿಹಳ್ಳಿ, ಸಿದ್ದರಾಮೇಶ್ವರ ಬಡಾವಣೆ, ಶಿವರಾಮ ಕಾರಂತ ನಗರ, ಕ್ಯಾತ್ಸಂದ್ರ ಮತ್ತು ಹಳೆಕೋಟೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ತುಮಕೂರು; ಆ.19 ರಿಂದ ಅನಿಯಮಿತ ವಿದ್ಯುತ್ ವ್ಯತ್ಯಯ
1ರಿಂದ 10ನೇ ತರಗತಿವರೆಗೆ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ವಿತರಣೆ; ಸಚಿವ ಮಧು ಬಂಗಾರಪ್ಪ ಚಾಲನೆ
+ There are no comments
Add yours