ಅಕ್ಕಿ ದರವೂ ಏರಿಕೆ; ಕುಚಲಕ್ಕಿ ದರ ಗಗನಕ್ಕೆ!; ರಾಜ್ಯದಲ್ಲಿ ನಿಯಂತ್ರಣಕ್ಕೆ ಬಾರದ ಬೆಲೆ ಏರಿಕೆ
Tumkurnews.in
ಮಂಗಳೂರು; ಟೊಮ್ಯಾಟೊ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಶಾಕ್ ಮುಂದುವರೆದಿದ್ದು, ಇದೀಗ ಕುಚುಲಕ್ಕಿ ಬೆಲೆಯೂ ಏರಿಕೆಯಾಗಿದೆ.
ರಾಜ್ಯದ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದ ನಿವಾಸಿಗಳು ಬೆಳ್ತಕ್ಕಿಯನ್ನು ಹೆಚ್ಚು ಬಳಸುವುದಿಲ್ಲ. ಬದಲಾಗಿ ಕುಚ್ಚಲಕ್ಕಿಯನ್ನು ಹೆಚ್ಚು ಬಳಸುತ್ತಾರೆ. ಜೊತೆಗೆ ಇಲ್ಲಿನ ಜನರ ಬೇಡಿಕೆಗೆ ತಕ್ಕಂತೆ ಸ್ಥಳೀಯವಾಗಿ ಉತ್ಪಾದನೆ ಮತ್ತು ಪೂರೈಕೆ ಇಲ್ಲ. ಹೀಗಾಗಿ ಕುಚ್ಚಲಕ್ಕಿಗೆ ಸದಾ ಬೇಡಿಕೆ ಮತ್ತು ಬೆಲೆ ಇದ್ದೇ ಇರುತ್ತದೆ. ಹೀಗಾಗಿ ಸಹಜವಾಗಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಇಲ್ಲಿನ ವರ್ತಕರು ಕುಚ್ಚಲಕ್ಕಿಯನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತಾರೆ. ಆದರೆ ಇದೀಗ ದಿಢೀರ್ ಬೆಲೆ ಏರಿಕೆಯಾಗಿದೆ.
ಬೆಲೆ ಹೆಚ್ಚಳ ಏಕೆ?: ಇತ್ತೀಚಿನ ದಿನಗಳಲ್ಲಿ ಭತ್ತ ಉತ್ಪಾದನೆ ತೀವ್ರವಾದ ಕುಸಿತ ಕಂಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಮಲೆನಾಡಿನ ಭತ್ತ ಬೆಳೆಯುವ ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಗದ್ದೆಗಳಲ್ಲಿ ಈಗ ಭತ್ತ ಬೆಳೆಯುತ್ತಿಲ್ಲ. ಕಾರ್ಮಿಕರ ಕೊರತೆ, ಸೂಕ್ತ ಬೆಲೆ ದೊರೆಯದಿರುವುದು ಇತ್ಯಾದಿ ಕಾರಣಕ್ಕಾಗಿ ಭತ್ತ ಬೆಳೆಯಿಂದ ರೈತರು ವಿಮುಖರಾಗಿದ್ದಾರೆ. ಬದಲಾಗಿ ಶುಂಠಿ ಮತ್ತಿತರ ಪರ್ಯಾಯ ಬೆಳೆಗಳ ಮೊರೆ ಹೋಗಿದ್ದಾರೆ. ಹೀಗಾಗಿ ಕುಚಲಕ್ಕಿ ಬೆಲೆ ಏರಿಕೆಯಾಗಿದೆ. ಜೊತೆಗೆ ವಾಣಿಜ್ಯ ಬಳಕೆಯ ವಿದ್ಯುತ್ ದರ ಹೆಚ್ಚಳ ಇವೆಲ್ಲಾ ಕಾರಣಗಳಿಂದ ತುಳುನಾಡಿನ ಅಚ್ಚುಮೆಚ್ಚಿನ ಕುಚ್ಚಲಕ್ಕಿ ದ ಏರಿಕೆಯಾಗಲಿದೆ.
ಎಷ್ಟು ಹೆಚ್ಚಳವಾಗಿದೆ?: ಕುಚ್ಚಲಕ್ಕಿ ದರ ಕಳೆದ ಮೂರು ತಿಂಗಳುಗಳಿಂದ ಏರಿಕೆಯಾಗುತ್ತಿದೆ. ಎರಡ್ಮೂರು ತಿಂಗಳ ಅವಧಿಯಲ್ಲೇ ಪ್ರತಿ ಕಿಲೋಗೆ ಸುಮಾರು 8 ರೂ. ಏರಿಕೆಯಾಗಿದೆ. ಕುಚ್ಚಲಕ್ಕಿಯಲ್ಲಿ ಆನಂದ ತಳಿಯ ದರ ಕೆ.ಜಿ.ಗೆ 49 ರೂ. ಇದ್ದು, ಆಗಸ್ಟ್ 8ರಿಂದ 51 ರೂ.ಗೆ ಏರಿಕೆಯಾಗಲಿದೆ. ಕಿಲೋಗೆ 55 ರೂ. ಇದ್ದ ಕಜೆ ಅಕ್ಕಿ ಬೆಲೆ 57 ರೂ. ಆಗಲಿದೆ. ಒಟ್ಟಾರೆಯಾಗಿ ಪ್ರತಿ ಕಿಲೋ ಕುಚ್ಚಲಕ್ಕಿ ಮೇಲೆ ಎರಡು ರೂ. ದರ ಏರಿಕೆಯಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.
ಹೆಣ್ಣಿನ ಧ್ವನಿ ಬಳಸಿ 41 ಲಕ್ಷ ಸುಲಿಗೆ! ತುಮಕೂರು ಮೂಲದ ಯುವಕ ಬಂಧನ
+ There are no comments
Add yours