ಇನ್ಮುಂದೆ ಬ್ಯಾಂಕುಗಳು ವಾರದ ಐದು ದಿನಗಳು ಮಾತ್ರ ಕಾರ್ಯನಿರ್ವಹಿಸುತ್ತವೆಯೇ?!
Tumkurnews.in
ಬೆಂಗಳೂರು: ಇನ್ಮುಂದೆ ಬ್ಯಾಂಕುಗಳು ವಾರದ ಐದು ದಿನಗಳು ಮಾತ್ರ ಕಾರ್ಯನಿರ್ವಹಿಸುತ್ತವೆಯೇ?! ಹೀಗೊಂದು ಚರ್ಚೆ ಶುರುವಾಗಿದೆ.
ಹೌದು, ಬ್ಯಾಂಕ್ ನೌಕರರಿಗೆ ತಿಂಗಳ ಎಲ್ಲ ಶನಿವಾರವು ರಜೆ ನೀಡುವ ಪ್ರಸ್ತಾವಕ್ಕೆ ಇಂಡಿಯನ್ ಬ್ಯಾಂಕರ್ಸ್ ಅಸೋಸಿಯೆಷನ್ (ಐಬಿಎ) ಒಪ್ಪಿಗೆ ನೀಡಿದೆ. ಈ ಕುರಿತಾದ ಶಿಫಾರಸನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ರವಾನಿಸಿದೆ ಎಂದು ತಿಳಿದುಬಂದಿದೆ. ಈ ಶಿಫಾರಸು ಜಾರಿಗೆ ಬಂದಲ್ಲಿ, ಇನ್ಮುಂದೆ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಬ್ಯಾಂಕ್’ಗಳು ಸೇವೆ ನೀಡಲಿವೆ.
ಎಲ್ಲಾ ಶನಿವಾರ ರಜೆ?; ಪ್ರಸ್ತುತ ಬ್ಯಾಂಕ್ ನೌಕರರಿಗೆ ಪ್ರತಿ ತಿಂಗಳ ಎರಡು ಹಾಗು ನಾಲ್ಕನೆಯ ಶನಿವಾರದಂದು ರಜೆ ಇದೆ. ಈ ರಜೆಯನ್ನು ವಾರದ ಎಲ್ಲ ಶನಿವಾರಗಳಿಗೂ ವಿಸ್ತರಣೆ ಮಾಡಬೇಕು ಎಂದು ಬ್ಯಾಂಕಿಂಗ್ ವಲಯದ ವಿವಿಧ ಕಾರ್ಮಿಕ ಸಂಘಟನೆಗಳು ಮನವಿ ಮಾಡಿದ್ದವು. ಜುಲೈ ತಿಂಗಳ ಕೊನೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಐಬಿಎ ಒಪ್ಪಿಗೆ ನೀಡಿದೆ.
ಇನ್ನೂ ಅಂತಿಮವಾಗಿಲ್ಲ; ಪ್ರಸ್ತಾವಕ್ಕೆ ಸಮ್ಮತಿಸಿರುವ ಐಬಿಎ ಅದನ್ನು ಹಣಕಾಸು ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಮುಂದುವರಿದು ಹಣಕಾಸು ಸಚಿವಾಲಯ ಹಾಗೂ ಕೇಂದ್ರ ಕಾರ್ಮಿಕ ಸಚಿವಾಲಯಗಳ ಸಮ್ಮತಿ ಸಿಗುವುದು ಬಾಕಿ ಇದೆ.
ತುಮಕೂರು; ಜಿಲ್ಲೆಯ ನ್ಯಾಯಾಲಯಗಳಲ್ಲಿ ಉದ್ಯೋಗ; ಅರ್ಜಿ ಆಹ್ವಾನ
+ There are no comments
Add yours