ತುಮಕೂರು; ಜಿಲ್ಲೆಯ ನ್ಯಾಯಾಲಯಗಳಲ್ಲಿ ಉದ್ಯೋಗ; ಅರ್ಜಿ ಆಹ್ವಾನ

1 min read

 

ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಉದ್ಯೋಗ; ಅರ್ಜಿ ಆಹ್ವಾನ

Tumkurnews.in
ತುಮಕೂರು; ಜಿಲ್ಲೆಯ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಸರ್ಕಾರಿ ಅಭಿಯೋಜಕರು-ವ-ಸಹಾಯಕ ಸರ್ಕಾರಿ ವಕೀಲರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳಿಗೆ ಮಾಸಿಕ ರೂ.30,000 ಸಂಚಿತ ಸಂಭಾವನೆಯಾಗಿ ಹಾಗೂ ರೂ.5000 ಗಳನ್ನು ಕಾರ್ಯನಿರ್ವಹಿಸುವ ಸೇವೆಗೆ ಪೂರಕವಾಗಿ ಅಗತ್ಯವಿರುವ ಸಿಬ್ಬಂದಿ ವೆಚ್ಚವೆಂದು ಒಟ್ಟು ರೂ.35,000 ಗಳನ್ನು ಪಡೆಯಲು ಅರ್ಹರಾಗಿರುವಂತೆ ಆಗಸ್ಟ್ 20ರೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿ, ತುಮಕೂರು ಜಿಲ್ಲೆ ಇಲ್ಲಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ತುಮಕೂರು ಜಿಲ್ಲೆಯ ಯಾವುದೇ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಲು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕಕ್ಕೆ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಅಥವಾ ಈಗಾಗಲೇ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳು ಮಾತ್ರ ಸೇವಾ ದೃಢೀಕರಣದ ಪತ್ರದೊಂದಿಗೆ ಅರ್ಜಿ ಸಲ್ಲಿಸುವುದು.
ಎಸ್ ಸಿ/ಎಸ್ ಟಿ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ ಕನಿಷ್ಠ 25 ವರ್ಷ, ಗರಿಷ್ಠ 42 ವರ್ಷ, ಪ್ರವರ್ಗ 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ ಕನಿಷ್ಠ 25 ಹಾಗೂ ಗರಿಷ್ಠ 40 ವರ್ಷ, ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ 25 ಮತ್ತು ಗರಿಷ್ಠ 37 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹೆಣ್ಣಿನ ಧ್ವನಿ ಬಳಸಿ 41 ಲಕ್ಷ ಸುಲಿಗೆ! ತುಮಕೂರು ಮೂಲದ ಯುವಕ ಬಂಧನ
ಅಭ್ಯರ್ಥಿಗಳು ತಾವು ವಕೀಲ ವೃತ್ತಿ ನಡೆಸುತ್ತಿರುವ ಬಗ್ಗೆ ಆಯಾ ನ್ಯಾಯಾಲಯದ ಪೀಠಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರಗಳನ್ನು ತಮ್ಮ ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯ. ವಕೀಲರ ಸಂಘದಿಂದ ಪಡೆದಿರುವ ನೋಂದಣಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.
ಗುತ್ತಿಗೆ ಆಧಾರದ ಮೇಲೆ ನೇಮಕಗೊಳ್ಳುವ ಅಭ್ಯರ್ಥಿಯ ಸೇವೆಯು ಸಂಪೂರ್ಣವಾಗಿ ತಾತ್ಕಾಲಿಕವಾಗಿರುತ್ತದೆ ಮತ್ತು ಯಾವುದೇ ಸಂದರ್ಭದಲ್ಲೂ ಖಾಯಂಗೊಳಿಸಲು ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳು ಅರ್ಜಿಯ ಜೊತೆಗೆ ವಿದ್ಯಾರ್ಹತೆ ಪ್ರಮಾಣ ಪತ್ರ(ಎಲ್‍ಎಲ್‍ಬಿ ಪದವಿ ಪ್ರಮಾಣ ಪತ್ರ), ಜಾತಿ ದೃಢೀಕರಣ ಪತ್ರ, ತಾವು ನಿರ್ವಹಿಸಿರುವ ಪ್ರಕರಣಗಳ ಬಗ್ಗೆ ಮಾಹಿತಿ, ತಮ್ಮ ವಯಸ್ಸಿನ ಹಾಗೂ ಸೇವಾನುಭವದ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.

ಸ್ಯಾಂಡಲ್’ವುಡ್ ನಟ ವಿಜಯ ರಾಘವೇಂದ್ರ ಪತ್ನಿ ನಿಧನ
ಆಯ್ಕೆಗೊಂಡ ಅಭ್ಯರ್ಥಿಯು ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ಕಂಡು ಬಂದಲ್ಲಿ ಅಂತಹ ಅಭ್ಯರ್ಥಿಗಳನ್ನು ಯಾವುದೇ ಸೂಚನೆ ಇಲ್ಲದೆ ತೆಗೆದು ಹಾಕಲಾಗುವುದು. ಅಭ್ಯರ್ಥಿಗಳು ಕಾಲಕಾಲಕ್ಕೆ ಸರ್ಕಾರ, ಅಭಿಯೋಗ ನಿರ್ದೇಶಕರು ನೀಡುವ ಸೂಚನೆಗಳನ್ನು ಪಾಲಿಸತಕ್ಕದ್ದು. ಆಯ್ಕೆಗೊಂಡ ಅಭ್ಯರ್ಥಿಗಳು ತಾವು ಪ್ರಸ್ತುತ ವಕೀಲ ವೃತ್ತಿಯನ್ನು ನಡೆಸುತ್ತಿರುವ ಸ್ಥಳವನ್ನು ಹೊರತುಪಡಿಸಿ ತಮ್ಮ ಜಿಲ್ಲೆಯಲ್ಲಿನ ಬೇರೆ ನ್ಯಾಯಾಲಯಗಳಲ್ಲಿ ಅಥವಾ ನೆರೆಯ ಜಿಲ್ಲೆಯ ನ್ಯಾಯಾಲಯಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಲು ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕಾಗಿದೆ.

ವಿಜಯ ರಾಘವೇಂದ್ರ ಪತ್ನಿ ಯಾರ ಮಗಳು? ನಿಧನಕ್ಕೆ ಕಾರಣವೇನು?
ಖಾಲಿ ಇರುವ ಹುದ್ದೆಗಳ ವಿವರ:
1. ಒಂದನೇ ಹೆಚ್ಚುವರಿ ಸಿ.ಜೆ (ಕಿ.ವಿ) ಮತ್ತು ಜೆಎಂಎಫ್‍ಸಿ 2 ನೇ ನ್ಯಾಯಾಲಯ, ತುಮಕೂರು
2. ನಾಲ್ಕನೇ ಅಧಿಕ ಸಿ.ಜೆ ಮತ್ತು ಜೆಎಂಎಫ್ ಸಿ 5 ನೇ ನ್ಯಾಯಾಲಯ,ತುಮಕೂರು
3.ಪ್ರಧಾನ ಸಿ.ಜೆ(ಕಿ.ವಿ) ಮತ್ತು ಜೆಎಂಎಫ್ ಸಿ ನ್ಯಾಯಾಲಯ,ಗುಬ್ಬಿ
4.ಅಧಿಕ ಸಿ.ಜೆ(ಕಿ.ವಿ) ಮತ್ತು ಜೆಎಂಎಫ್ ಸಿ ನ್ಯಾಯಾಲಯ, ಗುಬ್ಬಿ
5.ಪ್ರಧಾನ ಸಿ.ಜೆ(ಕಿ.ವಿ) ಮತ್ತು ಜೆಎಂಎಫ್ ಸಿ ನ್ಯಾಯಾಲಯ, ಚಿಕ್ಕನಾಯಕನಹಳ್ಳಿ
6.ಅಧಿಕ ಸಿ.ಜೆ(ಕಿ.ವಿ) ಮತ್ತು ಜೆಎಂಎಫ್ ಸಿ ನ್ಯಾಯಾಲಯ, ಚಿಕ್ಕನಾಯಕನಹಳ್ಳಿ
7.ಹಿರಿಯ ಸಿ.ಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯ, ಚಿಕ್ಕನಾಯಕನಹಳ್ಳಿ
8.ಸಿ.ಜೆ(ಕಿ.ವಿ) ಮತ್ತು ಜೆಎಂಎಫ್ ಸಿ ನ್ಯಾಯಾಲಯ, ತುರುವೇಕೆರೆ
9.ಸಿ.ಜೆ(ಹಿ.ವಿ) ಮತ್ತು ಜೆಎಂಎಫ್ ಸಿ ನ್ಯಾಯಾಲಯ, ತುರುವೇಕೆರೆ
10. ಪ್ರಧಾನ ಸಿ.ಜೆ(ಕಿ.ವಿ) ಮತ್ತು ಜೆಎಂಎಫ್ ಸಿ ನ್ಯಾಯಾಲಯ, ತಿಪಟೂರು
11.ಅಧಿಕ ಸಿ.ಜೆ(ಕಿ.ವಿ) ಮತ್ತು ಜೆಎಂಎಫ್ ಸಿ ನ್ಯಾಯಾಲಯ, ತಿಪಟೂರು
12.ಪ್ರಧಾನ ಸಿ.ಜೆ(ಕಿ.ವಿ) ಮತ್ತು ಜೆಎಂಎಫ್ ಸಿ ನ್ಯಾಯಾಲಯ, ಕುಣಿಗಲ್
13.ಅಧಿಕ ಸಿ.ಜೆ(ಕಿ.ವಿ) ಮತ್ತು ಜೆಎಂಎಫ್ ಸಿ ನ್ಯಾಯಾಲಯ, ಕುಣಿಗಲ್
14.ಪ್ರಧಾನ ಸಿ.ಜೆ(ಕಿ.ವಿ) ಮತ್ತು ಜೆಎಂಎಫ್ ಸಿ ನ್ಯಾಯಾಲಯ, ಶಿರಾ
15.ಅಧಿಕ ಸಿ.ಜೆ(ಕಿ.ವಿ) ಮತ್ತು ಜೆಎಂಎಫ್ ಸಿ ನ್ಯಾಯಾಲಯ, ಶಿರಾ
16.ಅಧಿಕ ಸಿ.ಜೆ(ಕಿ.ವಿ) ಮತ್ತು ಜೆಎಂಎಫ್ ಸಿ ನ್ಯಾಯಾಲಯ, ಪಾವಗಡ

ರಾಜ್ಯದಲ್ಲಿ ಮೆಡಿಕಲ್ ಸೀಟು ಶುಲ್ಕ ಶೇ.10 ಹೆಚ್ಚಳ! ಯಾವುದಕ್ಕೆಲ್ಲಾ ಅನ್ವಯ? ಇಲ್ಲಿದೆ ಮಾಹಿತಿ

About The Author

You May Also Like

More From Author

+ There are no comments

Add yours