Tumkurnews
ತುಮಕೂರು; 11ನೇ ರಾಜ್ಯ ಮಟ್ಟದ ರೈಫಲ್ ಶೂಟಿಂಗ್ ಕ್ರೀಡಾಕೂಟದಲ್ಲಿ ಇಲ್ಲಿನ ವಿವೇಕಾನಂದ ಸ್ಪೋರ್ಟ್ಸ್ ಅಂಡ್ ಕಲ್ಚರ್ ಅಸೋಸಿಯೇಷನ್’ಗೆ 21 ಪದಕಗಳು ಲಭಿಸಿವೆ. ಬೆಂಗಳೂರು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಶೂಟಿಂಗ್ ರೇಂಜ್’ನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ತುಮಕೂರಿನ ಶೂಟರ್’ಗಳು 7 ಚಿನ್ನದ ಪದಕ, 11 ಬೆಳ್ಳಿಪದಕ, ಮೂರು ಕಂಚಿನ ಪದಕ ಸೇರಿದಂತೆ 21 ಪದಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ರಾಜ್ಯದ ವಿವಿಧ ಕಡೆಯಿಂದ 900 ಶೂಟರ್’ಗಳು ಭಾಗವಹಿಸಿದ್ದರು. ವಿವೇಕಾನಂದ ಶೂಟಿಂಗ್ ಸಂಸ್ಥೆಯಿಂದ 48 ಶೂಟರ್’ಗಳು ಭಾಗವಹಿಸಿದ್ದರು. ಶ್ರೀ ತೇಜ್, ಧ್ಯಾನ್ ಟಿ ಎಂ, ಕಿರಣ್ ನಂದನ, ಸಾನಿಕಾ ಸುಲ್ತಾನ, ಸೆಚನ್, ಯಶಸ್, ವಿಜೇತ ಶೆಟ್ಟಿ, ಪೂರ್ಣಚಂದ್ರ, ಪವಿತ್ರ ಭಟ್, ಮಹೇಶ್ ಅವರು ವೈಯಕ್ತಿಕ ಹಾಗೂ ಮಿಕ್ಸೆಡ್ ಗುಂಪು ವಿಭಾಗದಲ್ಲಿ 21 ಪದಕಗಳನ್ನು ಪಡೆದಿದ್ದಾರೆ. ಒಟ್ಟು 32 ಶೂಟರ್’ಗಳು ದಕ್ಷಿಣ ವಲಯದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಎಲ್ಲಾ ಶೂಟರ್’ಗಳಿಗೆ NIS ಸರ್ಟಿಫೈಡ್ ತರಬೇತುದಾರರಾದ ಅನಿಲ್ ತರಬೇತಿ ನೀಡಿದ್ದಾರೆ.
+ There are no comments
Add yours