ಬಸ್ ಪಾಸ್ ಅವಧಿ ವಿಸ್ತರಣೆ
Tumkurnews
ಬೆಂಗಳೂರು: ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು 2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಬುಧವಾರದಿಂದ ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ, ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್’ನ ಅವಧಿಯನ್ನು ವಿಸ್ತರಿಸಿ ಆದೇಶಿಸಿದೆ. ಜೂನ್ 15ರ ವರೆಗೂ ಹಳೆಯ ಬಸ್ ಪಾಸ್ ಅವಧಿಯನ್ನು ವಿಸ್ತರಣೆ ಮಾಡಿ ಬುಧವಾರ ಕೆಎಸ್ಆರ್ಟಿಸಿ ಆದೇಶಿಸಿದೆ. ಇದು ಮೇ 31ಕ್ಕೆ ಅಂತ್ಯಗೊಳ್ಳಲಿದ್ದ ಎಲ್ಲಾ ಬಗೆಯ ವಿದ್ಯಾರ್ಥಿ ಬಸ್ ಪಾಸ್’ಗೆ ಅನ್ವಯವಾಗಲಿದ್ದು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ವಿದ್ಯಾರ್ಥಿಗಳು ತಮ್ಮ ಹಿಂದಿನ ವರ್ಷದ ಪಾಸನ್ನು ತೋರಿಸಿ ಪ್ರಯಾಣಿಸಬಹುದಾಗಿದೆ ಎಂದು ಕೆಎಸ್ಆರ್ಟಿಸಿ ಆದೇಶದಲ್ಲಿ ತಿಳಿಸಿದೆ.
ತುಮಕೂರು; ಈ 8 ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಡಿ; ಇಲಾಖೆ
+ There are no comments
Add yours